ಎರಡೇ ದಿನದಲ್ಲಿ ಮುಗಿದ ಮೂರನೇ ಟೆಸ್ಟ್: ಪಿಚ್ ಬಗ್ಗೆ ಪ್ರಶ್ನೆ ಎತ್ತಿದ ಯುವರಾಜ್ ಸಿಂಗ್ !

Update: 2021-02-25 16:56 GMT

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎರಡೇ ದಿನಗಳಲ್ಲಿ ಹೀನಾಯವಾಗಿ ಸೋಲಿಸಿದ ಹಿನ್ನೆಲೆಯಲ್ಲಿ ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಪಿಚ್ ಕುರಿತಾಗಿ ಪ್ರಶ್ನೆ ಎತ್ತಿದ್ದಾರೆ.

ಬುಧವಾರ ಆರಂಭವಾದ ಹಗಲು-ರಾತ್ರಿ ಪಂದ್ಯದಲ್ಲಿ ಉಭಯ ತಂಡಗಳು 150ಕ್ಕೂ ಅಧಿಕ ರನ್ ಗಳಿಸಲು ವಿಫಲವಾಗಿದ್ದವು. ಇಂಗ್ಲೆಂಡ್ ಮೊದಲ ಹಾಗೂ ಎರಡನೇ ಇನಿಂಗ್ಸ್ ನಲ್ಲಿ ಕ್ರಮವಾಗಿ 112 ಹಾಗೂ 81 ರನ್ ಗಳಿಸಿ ಆಲೌಟಾಗಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 145 ರನ್ ಗಳಿಸಿ ಆಲೌಟಾಗಿತ್ತು.

"ಎರಡೇ ದಿನದಲ್ಲಿ ಟೆಸ್ಟ್ ಪಂದ್ಯ ಕೊನೆಯಾಗಿದೆ. ಇದು ಟೆಸ್ಟ್ ಕ್ರಿಕೆಟಿಗೆ ಉತ್ತಮ ಎಂಬ ಬಗ್ಗೆ ನನ್ನ ಖಾತ್ರಿ ಇಲ್ಲ. ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಈರೀತಿಯ ಪಿಚ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರೆ ಸಾವಿರ ಹಾಗೂ 800 ವಿಕೆಟ್ ಗಳನ್ನು ಪಡೆಯುತ್ತಿದ್ದರು. ಆದಾಗ್ಯೂ ಉತ್ತಮ ಸ್ಪೆಲ್ ಎಸೆದಿರುವ ಅಕ್ಷರ್ ಪಟೇಲ್ ಗೆ ಅಭಿನಂದನೆಗಳು, 100 ಪಂದ್ಯವನ್ನಾಡಿದ ಇಶಾಂತ್ ಶರ್ಮಾ, ಉತ್ತಮ ಬೌಲಿಂಗ್ ಮಾಡಿದ್ದ ಅಶ್ವಿನ್ ಗೆ ಅಭಿನಂದನೆಗಳು'' ಎಂದು ಯುವರಾಜ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News