ಕಡುಬಡತನ ನಿವಾರಣೆ ಮೂಲಕ ಪವಾಡ ಸಾಧನೆ: ಚೀನಾ ಅಧ್ಯಕ್ಷ ಜಿನ್‌ಪಿಂಗ್ ಘೋಷಣೆ

Update: 2021-02-25 17:20 GMT

ಬೀಜಿಂಗ್ (ಚೀನಾ), ಫೆ. 25: ಕಡುಬಡತನವನ್ನು ನಿವಾರಿಸುವುದರೊಂದಿಗೆ ಚೀನಾವು ‘ಪವಾಡ’ವೊಂದನ್ನು ಸಾಧಿಸಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ಘೋಷಿಸಿದ್ದಾರೆ.

ಆದರೆ, ಕಡುಬಡತನವನ್ನು ಅಳೆಯುವ ಚೀನಾ ಕಮ್ಯುನಿಸ್ಟ್ ಪಕ್ಷದ ಮಾನದಂಡಗಳ ಸುತ್ತ ಆವರಿಸಿರುವ ಪ್ರಶ್ನೆಗಳು ಮುಂದುವರಿದಿವೆ.

ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಭವ್ಯ ಕಾರ್ಯಕ್ರಮವೊಂದರಲ್ಲಿ, ಗ್ರಾಮೀಣ ಪ್ರದೇಶಗಳ ಅಧಿಕಾರಿಗಳಿಗೆ ಅಧ್ಯಕ್ಷ ಜಿನ್‌ಪಿಂಗ್ ಪದಕಗಳನ್ನು ವಿತರಿಸಿದರು ಹಾಗೂ ಈ ‘ಚೀನೀ ಮಾದರಿಯ’ನ್ನು ಇತರ ಅಭಿವೃದ್ಧಿಶೀಲ ದೇಶಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದರು.

‘‘ಇಷ್ಟೊಂದು ಕಿರು ಅವಧಿಯಲ್ಲಿ, ಯಾವುದೇ ದೇಶಕ್ಕೆ ಕೋಟ್ಯಂತರ ಜನರನ್ನು ಬಡತನದಿಂದ ಮೇಲೆತ್ತಲು ಸಾಧ್ಯವಾಗಲಾರದು’’ ಎಂದು ಅವರು ಅಭಿಪ್ರಾಯಪಟ್ಟರು.

ದಿನಕ್ಕೆ 2.30 ಡಾಲರ್ (ಸುಮಾರು 167 ರೂಪಾಯಿ) ಚೀನಾದ ಬಡತನೆ ರೇಖೆಯಾಗಿದೆ. ಇದು ವಿಶ್ವಬ್ಯಾಂಕ್ ನಿಗದಿಪಡಿಸಿರುವ ಕನಿಷ್ಠ ಬಡತನ ರೇಖೆ 1.90 ಡಾಲರ್ (ಸುಮಾರು 138 ರೂಪಾಯಿ)ಗಿಂತ ಸ್ವಲ್ಪ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News