ಬೂದು ಪಟ್ಟಿಯಲ್ಲೇ ಮುಂದುವರಿಸಲು ಎಫ್‌ಎಟಿಎಫ್ ನಿರ್ಧಾರ

Update: 2021-02-26 16:29 GMT

ಪ್ಯಾರಿಸ್ (ಫ್ರಾನ್ಸ್), ಫೆ.26: ಭಯೋತ್ಪಾದನೆಗೆ ಪೂರೈಕೆಯಾಗುವ ಹಣದ ಮೇಲೆ ನಿಗಾ ಇಡುವ ಅಂತರ್‌ರಾಷ್ಟ್ರೀಯ ಕಾವಲು ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್), ಪಾಕಿಸ್ತಾನವನ್ನು ಈಗ ಇರುವ ‘ಬೂದು ಪಟ್ಟಿ’ಯಲ್ಲೇ ಮುಂದುವರಿಸಲು ನಿರ್ಧರಿಸಿದೆ.

ಬೂದು ಪಟ್ಟಿಯಲ್ಲಿರುವ ದೇಶಗಳ ಮೇಲೆ ಹೆಚ್ಚುವರಿ ನಿಗಾ ಇಡಲಾಗುತ್ತದೆ. ಬೂದು ಪಟ್ಟಿಯ ಮುಂದಿನ ಹಂತವಾಗಿರುವ ಕಪ್ಪು ಪಟ್ಟಿಗೆ ಯಾವುದೇ ದೇಶ ಸೇರ್ಪಡೆಯಾದರೆ, ಆ ದೇಶಕ್ಕೆ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಯಾವುದೇ ನೆರವು ನೀಡುವುದಿಲ್ಲ ಹಾಗೂ ದೇಶಗಳು ಅಂತರ್‌ರಾಷ್ಟ್ರೀಯ ಆರ್ಥಿಕ ದಿಗ್ಬಂಧನಗಳಿಗೆ ಗುರಿಯಾಗುತ್ತವೆ.

‘‘ಭಯೋತ್ಪಾದನೆಗೆ ಹರಿಯುವ ಹಣವನ್ನು ತಡೆಯುವಲ್ಲಿ ಪಾಕಿಸ್ತಾನವು ತೀವ್ರ ವೈಫಲ್ಯವನ್ನು ಅನುಭವಿಸಿದೆ ಹಾಗೂ ಈ ವಿಷಯವನ್ನು ನಿಭಾಯಿಸುವ ಪರಿಣಾಮಕಾರಿ ವ್ಯವಸ್ಥೆಯೊಂದನ್ನು ಅದು ಹೊಂದಿಲ್ಲ’’ ಎಂದು ಎಫ್‌ಎಟಿಎಫ್ ತಿಳಿಸಿದೆ.

 ಪಾಕಿಸ್ತಾನಕ್ಕೆ ನೀಡಲಾಗಿರುವ ಗಡುವು ಈಗಾಗಲೇ ಮುಕ್ತಾಯಗೊಂಡಿದೆ ಹಾಗೂ ‘‘ಎಷ್ಟು ಸಾಧ್ಯವೋ ಅಷ್ಟು ಬೇಗ ನಮ್ಮ ಕಳವಳಗಳನ್ನು ನಿವಾರಿಸಿ’’ ಎಂಬುದಾಗಿ ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದು ಗುರುವಾರ ಪ್ಯಾರಿಸ್‌ನಲ್ಲಿ ನಡೆದ ಸಭೆಯ ಬಳಿಕ ಎಫ್‌ಎಟಿಎಫ್ ಅಧ್ಯಕ್ಷ ಮಾರ್ಕಸ್ ಪ್ಲೆಯರ್ ಹೇಳಿದರು.

‘‘ಪಾಕಿಸ್ತಾನವು ಇಲ್ಲಿಯವರೆಗೆ, 27 ವಿಷಯಗಳ ಪೈಕಿ 24ನ್ನು ಇತ್ಯರ್ಥಪಡಿಸಿದೆ. ಈಗ ಅದಕ್ಕೆ ನೀಡಲಾಗಿರುವ ಗಡುವು ಮುಕ್ತಾಯಗೊಂಡಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News