ಲಂಕಾ: ಚೀನಾ ಲಸಿಕೆಗೆ ತಡೆ; ಭಾರತದ ಲಸಿಕೆ ಬಳಕೆ

Update: 2021-02-26 16:45 GMT

 ಕೊಲಂಬೊ (ಶ್ರೀಲಂಕಾ), ಫೆ. 26: ಶ್ರೀಲಂಕಾವು ಚೀನಾದ ಸಿನೋಫಾರ್ಮ್ ಕೋವಿಡ್-19 ಲಸಿಕೆಯ ಬಳಕೆಯನ್ನು ತಡೆಹಿಡಿದಿದೆ ಹಾಗೂ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಆಕ್‌ಫರ್ಡ್-ಆ್ಯಸ್ಟ್ರಝೆನೆಕ ಲಸಿಕೆಯನ್ನು ಉಪಯೋಗಿಸಲಿದೆ ಎಂದು ಸರಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.ಸಿನೋಫಾರ್ಮ್ ಕೊರೋನ ವೈರಸ್ ಲಸಿಕೆಯು ಮೂರನೇ ಹಂತದ ಪರೀಕ್ಷೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ ಎಂಬುದಾಗಿ ಶ್ರೀಲಂಕಾ ಸಚಿವ ಸಂಪುಟದ ಸಹ ವಕ್ತಾರ ರಮೇಶ್ ಪತಿರಣ ಹೇಳಿದ್ದಾರೆ ಎಂದು ‘ಡೇಲಿ ಮಿರರ್’ ಪತ್ರಿಕೆ ವರದಿ ಮಾಡಿದೆ.ಚೀನಾ ಕೊರೋನ ವೈರಸ್ ಲಸಿಕೆಯ ನೋಂದಣಿಗೆ ಸಂಬಂಧಿಸಿದ ಸಮಗ್ರ ದಾಖಲೆ ಇನ್ನೂ ತಲುಪಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News