×
Ad

ಖಾಸಗಿತನ ಉಲ್ಲಂಘನೆ: ಫೇಸ್‌ಬುಕ್‌ನಿಂದ 4,785 ಕೋಟಿ ರೂ. ಪರಿಹಾರಕ್ಕೆ ಅನುಮೋದನೆ

Update: 2021-03-01 21:53 IST

ವಾಶಿಂಗ್ಟನ್, ಮಾ. 1: ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಮತ್ತು ಇಲಿನಾಯಿಸ್ ರಾಜ್ಯದ 16 ಲಕ್ಷ ಬಳಕೆದಾರರ ನಡುವಿನ ಖಾಸಗಿತನ ಉಲ್ಲಂಘನೆ ಪ್ರಕರಣದಲ್ಲಿ, ಫೇಸ್‌ಬುಕ್ ನೀಡಬೇಕಾಗಿರುವ 650 ಮಿಲಿಯ ಡಾಲರ್ (ಸುಮಾರು 4,785 ಕೋಟಿ ರೂಪಾಯಿ) ಪರಿಹಾರಕ್ಕೆ ಅಮೆರಿಕದ ಫೆಡರಲ್ ನ್ಯಾಯಾಧೀಶರೊಬ್ಬರು ಅನುಮೋದನೆ ನೀಡಿದ್ದಾರೆ.

‘‘ಪ್ರಕರಣ ಇತ್ಯರ್ಥಗೊಂಡಿರುವುದರಿಂದ ನಮಗೆ ಸಂತೋಷವಾಗಿದೆ. ಇನ್ನು ನಾವು ಈ ವಿಷಯವನ್ನು ಬಿಟ್ಟು ಮುಂದಕ್ಕೆ ಹೋಗಬಹುದಾಗಿದೆ. ಇದು ನಮ್ಮ ಸಮುದಾಯ ಮತ್ತು ನಮ್ಮ ಶೇರುದಾರರ ಹಿತಾಸಕ್ತಿಯ ದೃಷ್ಟಿಯಿಂದ ಮುಖ್ಯವಾಗಿದೆ’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯೊಂದರಲ್ಲಿ ಫೇಸ್‌ಬುಕ್ ವಕ್ತಾರರೊಬ್ಬರು ತಿಳಿಸಿದರು.

ಫೇಸ್‌ಬುಕ್ 2008ರ ಇಲಿನಾಯಿಸ್ ಖಾಸಗಿತನ ಕಾನೂನನ್ನು ಉಲ್ಲಂಘಿಸಿ, ಜನರ ಮುಖಗಳನ್ನು ಗುರುತಿಸುವುದಕ್ಕಾಗಿ ಅವರ ಬಯೋಮೆಟ್ರಿಕ್ ಅಂಕಿಅಂಶಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದೆ ಎಂದು ಆರೋಪಿಸಿ ಶಿಕಾಗೊ ವಕೀಲ ಜೇ ಎಡಲ್ಸನ್ 2015ರಲ್ಲಿ ಫೇಸ್‌ಬುಕ್ ವಿರುದ್ಧ ಮೊಕದ್ದಮೆ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News