‘ಮೇಕ್ ಇನ್ ಇಂಡಿಯಾ’ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ದೊಡ್ಡ ಸವಾಲು: ಅಮೆರಿಕ

Update: 2021-03-02 15:41 GMT

ವಾಶಿಂಗ್ಟನ್, ಮಾ. 2: ಭಾರತದ ‘ಮೇಕ್ ಇನ್ ಇಂಡಿಯಾ’ ಅಭಿಯಾನವು ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ ಎಂದು ಅಮೆರಿಕದ ಬೈಡನ್ ಆಡಳಿತವು ದೇಶದ ಸಂಸತ್ತಿಗೆ ತಿಳಿಸಿದೆ.

ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಎದುರಾಗಿರುವ ಅಡ್ಡಿ-ಆತಂಕಗಳು ಅಮೆರಿಕದ ರಫ್ತುದಾರರ ಮೇಲೆ ಪರಿಣಾಮ ಬೀರಿವೆ. 2020ರಲ್ಲಿ ಈ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಮೆರಿಕವು ಭಾರತದೊಂದಿಗೆ ನಿರಂತರ ಮಾತುಕತೆಗಳನ್ನು ನಡೆಸಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ತನ್ನ ‘2021 ವ್ಯಾಪಾರ ನೀತಿ ಕಾರ್ಯಸೂಚಿ ಮತ್ತು 2020 ವಾರ್ಷಿಕ ವರದಿ’ಯಲ್ಲಿ ಹೇಳಿದ್ದಾರೆ.

‘‘ಭಾರತದ ಬೃಹತ್ ಮಾರುಕಟ್ಟೆ, ಆರ್ಥಿಕ ಅಭಿವೃದ್ಧಿ ಮತ್ತು ಅಭಿವೃದ್ಧಿಯತ್ತ ಅದು ಇಡುತ್ತಿರುವ ಹೆಜ್ಜೆಗಳಿಂದಾಗಿ ಅಮೆರಿಕದ ಹಲವು ರಫ್ತುದಾರರಿಗೆ ಅದು ಪ್ರಮುಖ ಮಾರುಕಟ್ಟೆಯಾಗಿದೆ. ಆದರೆ, ನಿರಂತರ ವ್ಯಾಪಾರ ನಿರ್ಬಂಧ ನೀತಿಗಳು ದ್ವಿಪಕ್ಷೀಯ ವ್ಯಾಪಾರ ಸಂಬಂಧ ಸಂಪೂರ್ಣ ಸಾಧ್ಯತೆಗಳ ಆವಿಷ್ಕಾರಕ್ಕೆ ತಡೆಯಾಗಿವೆ. ಇತ್ತೀಚೆಗೆ ಭಾರತವು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಮೂಲಕ ಆಮದಿಗೆ ಪರ್ಯಾಯವಾಗಿರುವ ವ್ಯವಸ್ಥೆಯೊಂದನ್ನು ಮಾಡಿಕೊಂಡಿದ್ದು, ದ್ವಿಪಕ್ಷೀಯ ವ್ಯಾಪಾರ ಬಾಂಧವ್ಯಕ್ಕೆ ಎದುರಾಗಿರುವ ದೊಡ್ಡ ಸವಾಲಾಗಿದೆ’’ ಎಂದು ಸೋಮವಾರ ಸಂಸತ್ತು ಕಾಂಗ್ರೆಸ್‌ಗೆ ಸಲ್ಲಿಸಿರುವ ವರದಿಯಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News