ನಾಲ್ಕನೇ ಟೆಸ್ಟ್: ಭಾರತ 365 ರನ್‍ಗೆ ಆಲೌಟ್, 160 ರನ್‍ ಇನಿಂಗ್ಸ್ ಮುನ್ನಡೆ

Update: 2021-03-06 06:18 GMT

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತವು ಮೊದಲ ಇನಿಂಗ್ಸ್ ನಲ್ಲಿ 365 ರನ್ ಗೆ ಆಲೌಟಾಗಿದೆ. ಈ ಮೂಲಕ ಮೊದಲ  ಇನಿಂಗ್ಸ್ ನಲ್ಲಿ 160 ರನ್ ಮುನ್ನಡೆ ಪಡೆಯುವಲ್ಲಿಯೂ ಯಶಸ್ವಿಯಾಗಿದೆ.

ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಗೆ ಉತ್ತರವಾಗಿ ಭಾರತವು ಒಂದು ಹಂತದಲ್ಲಿ 6 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆಗ ರಿಷಭ್ ಪಂತ್ ಶತಕ ಹಾಗೂ ವಾಶಿಂಗ್ಟನ್ ಸುಂದರ್ ಭರ್ಜರಿ ಅರ್ಧಶತಕ(96, 174 ಎಸೆತ)ನೆರವಿನಿಂದ ಇಂಗ್ಲೆಂಡ್ ಗೆ ತಿರುಗೇಟು ನೀಡಿ 1144 ಓವರ್‍ಗಳಲ್ಲಿ 365 ರನ್ ಗಳಿಸಲು ಶಕ್ತವಾಗಿದೆ. 

ಮೂರನೇ ದಿನವಾದ ಶನಿವಾರ 7 ವಿಕೆಟ್ ನಷ್ಟಕ್ಕೆ 294 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಸುಂದರ್ ಹಾಗೂ ಅಕ್ಷರ್ ಪಟೇಲ್ ಆಸರೆಯಾದರು. ಈ ಇಬ್ಬರು 8ನೇ ವಿಕೆಟಿಗೆ 106 ರನ್ ಜೊತೆಯಾಟ ನಡೆಸಿ ತಂಡಕ್ಕೆ ಇನಿಂಗ್ಸ್ ಮುನ್ನಡೆ ಒದಗಿಸಿಕೊಟ್ಟರು.

ಔಟಾಗದೆ 96 ರನ್(174 ಎಸೆತ, 10 ಬೌಂಡರಿ, 1 ಸಿಕ್ಸರ್)ಕೇವಲ 4 ರನ್ ನಿಂದ ಚೊಚ್ಚಲ ಶತಕ ವಂಚಿತರಾದರು. ಅಕ್ಷರ್ ಪಟೇಲ್ 43 ರನ್(97 ಎಸೆತ, 5 ಬೌಂಡರಿ, 1 ಸಿಕ್ಸರ್)ಉತ್ತಮ ಪ್ರದರ್ಶನ ನೀಡಿ ತಂಡದ ಮುನ್ನಡೆ ಹಿಗ್ಗಿಸಲು ನೆರವಾದರು. ಪಟೇಲ್ ಔಟಾದ ತಕ್ಷಣ ಬಾಲಂಗೋಚಿಗಳಾದ ಇಶಾಂತ್ ಶರ್ಮಾ(0)ಹಾಗೂ ಮುಹಮ್ಮದ್ ಸಿರಾಜ್(0)ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಗೆ ವಾಪಸಾದ ಕಾರಣ ಸುಂದರ್ ಗೆ ಚೊಚ್ಚಲ ಶತಕ ಪೂರೈಸಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಬೆನ್ ಸ್ಟೋಕ್ಸ್(4-89) ಯಶಸ್ವಿ ಬೌಲರ್ ಎನಿಸಿಕೊಂಡರು. ಜೇಮ್ಸ್ ಆ್ಯಂಡರ್ಸನ್(3-44)ಹಾಗೂ ಜಾಕ್ ಲೀಚ್(2-89)ಐದು ವಿಕೆಟ್ ಗಳನ್ನು ಹಂಚಿಕೊಂಡರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News