14ನೇ ಆವೃತ್ತಿಯ ಐಪಿಎಲ್ ಎ.9ರಿಂದ ಆರಂಭ: ಬಿಸಿಸಿಐ

Update: 2021-03-08 03:54 GMT

ಹೊಸದಿಲ್ಲಿ: ಮುಂಬರುವ 14ನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್ ನ ಸಂಪೂರ್ಣ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ರವಿವಾರ ಪ್ರಕಟಿಸಿದೆ.

ಎಪ್ರಿಲ್ 9ರಂದು ಚೆನ್ನೈನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮುಖಾಮುಖಿಯೊಂದಿಗೆ ಐಪಿಎಲ್-2021 ಆರಂಭವಾಗಲಿದೆ. ಲೀಗ್‍ನ ಅಂತಿಮ ಪಂದ್ಯವು ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಮಧ್ಯೆ ಅಹ್ಮದಾಬಾದ್ ನಲ್ಲಿ ನಡೆಯಲಿದೆ.  ಫೈನಲ್ ಪಂದ್ಯವು ಮೇ 30ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ.

ಸಂಜೆಯ ಪಂದ್ಯವು ಮಧ್ಯಾಹ್ನ 3:30ಕ್ಕೆ ಆರಂಭವಾದರೆ, ರಾತ್ರಿಯ ಪಂದ್ಯವು 7:30ಕ್ಕೆ ಆರಂಭವಾಗಲಿದೆ.

ಭಾರತದ ಆರು ತಾಣಗಳಲ್ಲಿ ಬಯೋ-ಬಬಲ್ ಅಡಿ ಟೂರ್ನಿ ನಡೆಯಲಿದೆ. ಜೈವಿಕ ಸುರಕ್ಷತಾ ಪರಿಸರದಲ್ಲಿ ದೇಶಾದ್ಯಂತ ಬಿಳಿ ಚೆಂಡಿನ ದೇಶಿಯ ಟೂರ್ನಮೆಂಟ್ ಆಯೋಜಿಸುತ್ತಿದೆ.

ಭಾರತದಲ್ಲಿ ನಡೆಯಲಿರುವ ವಿವೊ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಯು ರವಿವಾರ ಪ್ರಕಟಿಸಿದೆ.  ಐಪಿಎಲ್ ಟೂರ್ನಿಯು ಅಹಮದಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಮುಂಬೈ ಹಾಗೂ ಕೋಲ್ಕತಾದಲ್ಲಿ ನಡೆಯಲಿದೆ.

ಎಪ್ರಿಲ್ 9ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಆರ್ ಸಿಬಿ ಮುಖಾಮುಖಿಯೊಂದಿಗೆ 2021ರ ಐಪಿಎಲ್ ಟೂರ್ನಿ ಆರಂಭವಾಗಲಿದೆ. ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 30ರಂದು ಫೈನಲ್ ಪಂದ್ಯ ನಡೆಯುವುದು. ಪ್ರತಿ ತಂಡವು ಲೀಗ್ ಹಂತದಲ್ಲಿ 4 ತಾಣಗಳಲ್ಲಿ ಆಡಲಿದೆ. 56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಮುಂಬೈ, ಕೋಲ್ಕತಾ ಹಾಗೂ ಬೆಂಗಳೂರು ತಲಾ 10 ಪಂದ್ಯಗಳ ಆತಿಥ್ಯವಹಿಸಲಿವೆ. ಅಹಮದಾಬಾದ್ ಹಾಗೂ ದಿಲ್ಲಿ ಸ್ಟೇಡಿಯಂಗಳು ತಲಾ 8 ಪಂದ್ಯಗಳನ್ನು ಆಯೋಜಿಸಲಿವೆ. ಎಲ್ಲ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯುವುದು ಈಬಾರಿಯ ಟೂರ್ನಿಯ ವಿಶೇಷ.  ಯಾವ ತಂಡವೂ ತವರು ಮೈದಾನದಲ್ಲಿ ಆಡುವುದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News