ಪ್ರಥಮ ಏಕದಿನ: ಭಾರತದ ವನಿತೆಯರಿಗೆ ಸೋಲು

Update: 2021-03-08 03:50 GMT

  ಲಕ್ನೊ: ದಕ್ಷಿಣ ಆಫ್ರಿಕ ತಂಡದ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಸೋಲು ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ವನಿತೆಯರ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿತ್ತು.

 ಮಿಥಾಲಿ ರಾಜ್ 50, ಹರ್ಮನ್‌ಪ್ರೀತ್ ಕೌರ್ 40, ದೀಪ್ತಿ ಶರ್ಮಾ 27 ರನ್ ಗಳಿಸಿದರು.

 ಶಬ್‌ನಮ್ ಇಸ್ಮಾಯೀಲ್ (28ಕ್ಕೆ 3) ಮತ್ತು ಎನ್. ಮ್ಲಾಬಾ (41ಕ್ಕೆ 2) ದಾಳಿಗೆ ಸಿಲುಕಿದ ಭಾರತದ ಮಹಿಳಾ ತಂಡಕ್ಕೆ ದೊಡ್ಡ ಮೊತ್ತವನ್ನು ಕೂಡಿ ಹಾಕಲು ಸಾಧ್ಯವಾಗಲಿಲ್ಲ. 2021ರಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕ ತಂಡ 40.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಿತು. ಲಿಜೆಲ್ ಲೀ ಔಟಾಗದೆ 83 ರನ್(122 ಎ,11ಬೌ,1ಸಿ) ಲಾರಾ ವೊಲ್ವಾರ್ಡ್ 80(110ಎ, 12ಬೌ) ರನ್ ಗಳಿಸಿ ದಕ್ಷಿಣ ಆಫ್ರಿಕ ತಂಡದ ಗೆಲುವಿಗೆ ನೆರವಾದರು.

 ಭಾರತದ ಅನುಭವಿ ವೇಗಿ ಜುಲಾನ್ ಗೋಸ್ವಾಮಿ 38ಕ್ಕೆ 2 ವಿಕೆಟ್ ಪಡೆದರು.

 ಗೋಸ್ವಾಮಿ ನವೆಂಬರ್ 2019ರಿಂದ ತನ್ನ ಮೊದಲ ಪಂದ್ಯವನ್ನು ಆಡಿದ್ದಾರೆ. ಚೊಚ್ಚಲ ಪಂದ್ಯವನ್ನಾಡಿದ ವೇಗಿ ಮೋನಿಕಾ ಪಟೇಲ್ ಕೇವಲ ನಾಲ್ಕು ಓವರ್‌ಗಳ ಬೌಲಿಂಗ್ ನಡೆಸಿ 20 ರನ್ ಬಿಟ್ಟುಕೊಟ್ಟರು. ಯಾವುದೇ ವಿಕೆಟ್ ಪಡೆಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News