×
Ad

ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ದಾಖಲೆ ಮುರಿದ ಪೃಥ್ವಿ ಶಾ

Update: 2021-03-09 19:52 IST
Photo: bcci

ಹೊಸದಿಲ್ಲಿ: ಈಗ ನಡೆಯುತ್ತಿರುವ ವಿಜಯ ಹಝಾರೆ ಟ್ರೋಫಿಯಲ್ಲಿ ಔಟಾಗದೆ 185 ರನ್ ಗಳಿಸಿದ ಮುಂಬೈ ನಾಯಕ ಪೃಥ್ವಿ ಶಾ  ಲಿಸ್ಟ್ ಎ ಕ್ರಿಕೆಟಿನ ರನ್ ಚೇಸಿಂಗ್ ವೇಳೆ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡರು. ಇದರೊಂದಿಗೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ನಾಯಕ ವಿರಾಟ್ ಕೊಹ್ಲಿಯವರ ದಾಖಲೆಯನ್ನು ಮುರಿದರು. 

ಮಂಗಳವಾರ ನಡೆದ ವಿಜಯ ಹಝಾರೆ ಟ್ರೋಫಿಯಲ್ಲಿ ಸೌರಾಷ್ಟ್ರದ ವಿರುದ್ಧ 123 ಎಸೆತಗಳಲ್ಲಿ 21 ಬೌಂಡರಿ, 7 ಸಿಕ್ಸರ್ ಗಳ ಸಹಿತ ಔಟಾಗದೆ 185 ರನ್ ಗಳಿಸಿರುವ ಶಾ ಈ ಸಾಧನೆ ಮಾಡಿದರು.

ಧೋನಿ 2005ರಲ್ಲಿ ಜೈಪುರದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಔಟಾಗದೆ 183 ರನ್ ಸಿಡಿಸಿದ್ದರು. 2012ರಲ್ಲಿ ಢಾಕಾದಲ್ಲಿ ನಡೆದಿದ್ದ ಏಶ್ಯಾ ಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತವು 6 ವಿಕೆಟ್ ಗಳಿಂದ ಗೆದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ 183 ರನ್ ಗಳಿಸಿದ್ದರು.

ಮುಂಬೈ ತಂಡವನ್ನು ವಿಜಯ ಹಝಾರೆ ಟ್ರೋಫಿಯಲ್ಲಿ ಸೆಮಿ ಫೈನಲ್ ಗೆ ತಲುಪಿಸಿರುವ ಪೃಥ್ವಿ ಶಾ ಅವರು ಧೋನಿ ಹಾಗೂ ಕೊಹ್ಲಿಯವರ ದಾಖಲೆಯನ್ನೂ ಮುರಿದರು.

ಪೃಥ್ವಿ ಶಾ ಹಾಗೂ ಯಶಸ್ವಿ ಜೈಸ್ವಾಲ್ (75, 104 ಎಸೆತ) ಮೊದಲ ವಿಕೆಟ್ ಗೆ 238 ರನ್ ಜೊತೆಯಾಟ ನಡೆಸಿ ಮುಂಬೈ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಸೌರಾಷ್ಟ್ರ ತಂಡವನ್ನು 9 ವಿಕೆಟ್ ಗಳಿಂದ ಮಣಿಸಲು ನೆರವಾದರು.

ಮುಂಬೈ ತಂಡ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಅವರಿಲ್ಲದೆ ಆಡಿತು. ಈ ಇಬ್ಬರು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಗೆ ತಯಾರಿ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News