ಮೊದಲ ಟ್ವೆಂಟಿ-20: ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡಿದ ಇಂಗ್ಲೆಂಡ್ ಆಟಗಾರರು

Update: 2021-03-12 16:11 GMT

ಅಹಮದಾಬಾದ್: ಇಂಗ್ಲೆಂಡ್ ಆಟಗಾರರು ಶುಕ್ರವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು.

ಇತ್ತೀಚೆಗೆ ನಿಧನರಾದ ಮಾಜಿ ಆಟಗಾರ ಜಾಯ್ ಬೆಂಜಮಿನ್ ಸ್ಮರಣಾರ್ಥ ಪ್ರವಾಸಿ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದರು.

60ರ ವಯಸ್ಸಿನ ಇಂಗ್ಲೆಂಡ್ ಹಾಗೂ ಸರ್ರೆಯ ಮಾಜಿ ವೇಗದ ಬೌಲರ್ ಬೆಂಜಮಿನ್ ಈ ವಾರಾರಂಭದಲ್ಲಿ  ಹೃದಯಸ್ತಂಭನದಿಂದ ನಿಧನರಾಗಿದ್ದರು.

ಬೆಂಜಮಿನ್ ಸೈಂಟ್ ಕಿಟ್ಸ್ ನಲ್ಲಿ 1961ರಲ್ಲಿ ಜನಿಸಿದ್ದರು. ತನ್ನ ಕುಟುಂಬದೊಂದಿಗೆ 15ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಗೆ ವಲಸೆ ಹೋಗಿದ್ದರು. ಬರ್ಮಿಂಗ್ ಹ್ಯಾಮ್ ಲೀಗ್ ಕ್ರಿಕೆಟ್ ನಲ್ಲಿ ತನ್ನ ವೃತ್ತಿಜೀವನ ಆರಂಭಿಸಿದ ಬೆಂಜಮಿನ್ ಸ್ಟಾಫೋರ್ಡ್ ಶೈರ್ ಪರ ಆಡುವುದರೊಂದಿಗೆ ಪ್ರಸಿದ್ಧಿ ಪಡೆದಿದ್ದರು.

ಬೆಂಜಮಿನ್ ವಾರ್ವಿಕ್ ಶೈರ್ ಪರವಾಗಿ ನಾಲ್ಕು ವರ್ಷಗಳ ಕಾಲ ಕೇವಲ 25 ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದು, ಒಟ್ಟು 387 ವಿಕೆಟ್ ಗಳನ್ನು ಪಡೆದಿದ್ದಾರೆ. 1994ರಲ್ಲಿ ದ. ಆಫ್ರಿಕಾ ವಿರುದ್ದ ಇಂಗ್ಲೆಂಡ್ ತಂಡದ ಪರ  ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News