ರಾಜ್ಯ ಈಜು ಚಾಂಪಿಯನ್ ಶಿಪ್ 2021: ಆದಿತ್ಯ ಭಂಡಾರಿ ಅಮೋಘ ಸಾಧನೆ
Update: 2021-03-12 23:17 IST
ಬೆಂಗಳೂರು: ಕರ್ನಾಟಕ ಈಜು ಸಂಸ್ಥೆಯು ನಗರದ ದ್ರಾವಿಡ್ ಪಡುಕೋಣೆ ಸ್ಪೋರ್ಟ್ಸ್ ಸೆಂಟರ್ ನಲ್ಲಿ ರಾಜ್ಯ ಈಜು ಚಾಂಪಿಯನ್ ಶಿಪ್ 2021 ಆಯೋಜಿಸಿದೆ. ಜೈಹಿಂದ್ ಸ್ವಿಮ್ಮಿಂಗ್ ಕ್ಲಬ್ ನ ಆದಿತ್ಯ ಜಿ.ಭಂಡಾರಿ 50 ಮೀ.ಬಟರ್ ಫ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಬಾಚಿಕೊಂಡರು. 100 ಮೀ.ಫ್ರೀಸ್ಟೈಲ್, 50 ಮೀ. ಫ್ರೀಸ್ಟೈಲ್, 50 ಮೀ.ಬ್ಯಾಕ್ ಸ್ಟ್ರೋಕ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಆದಿತ್ಯ ದಕ್ಷಿಣ ಕನ್ನಡ ಜಿಲ್ಲೆಯ ಪರ ಪದಕ ಗೆದ್ದಿರುವ ಏಕೈಕ ಸ್ಪರ್ಧಿಯಾಗಿದ್ದರು. ಆದಿತ್ಯ ಅವರು ವಿ.ರಾಮಕೃಷ್ಣ ರಾವ್ ಹಾಗೂ ರಾಜೇಶ್ ಅಂಥೋನಿ ಬೆಂಗ್ರೆ ಅವರ ನಾಯಕತ್ವದಲ್ಲಿ ತರಬೇತಿ ಪಡೆದಿದ್ದಾರೆ.ಸದ್ಯ ಯೆನೆಪೋಯ ಸ್ಕೂಲ್ ಹಾಗೂ ಸಿಟಿ ಕಾಪೋರೇಶನ್ ಸ್ವಿಮ್ಮಿಂಗ್ ಕೊಳದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.