×
Ad

ಕಬಡ್ಡಿ ಚಾಂಪಿಯನ್ ಶಿಪ್ ವೇಳೆ ಏಕಾಏಕಿ ಕುಸಿದ ಸ್ಟ್ಯಾಂಡ್: 100ಕ್ಕೂ ಅಧಿಕ ಪ್ರೇಕ್ಷಕರಿಗೆ ಗಾಯ

Update: 2021-03-22 20:57 IST
ಸಾಂದರ್ಭಿಕ ಚಿತ್ರ

ಹೈದರಾಬಾದ್: ತೆಲಂಗಾಣದ ಸೂರ್ಯ ಪೇಟ್ ನಲ್ಲಿ ಸೋಮವಾರ 47ನೇ ಆವೃತ್ತಿಯ ಜೂನಿಯರ್ ನ್ಯಾಶನಲ್ ಕಬಡ್ಡಿ ಚಾಂಪಿಯನ್ ಶಿಪ್ ನಡೆಯುತ್ತಿದ್ದಾಗ ಸ್ಟ್ಯಾಂಡ್ ವೊಂದು ಕುಸಿದುಬಿದ್ದ ಪರಿಣಾಮವಾಗಿ 100ಕ್ಕೂ ಅಧಿಕ ಪ್ರೇಕ್ಷಕರು ಗಾಯಗೊಂಡಿದ್ದಾರೆ.

ಸೂರ್ಯಪೇಟೆಯ ಎಸ್ ಪಿ ಕಚೇರಿ ಮೈದಾನದಲ್ಲಿ ಈ ಘಟನೆ ನಡೆದಿದೆ.47ನೇ ಆವೃತ್ತಿಯ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಟೂರ್ನಮೆಂಟ್ ನ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಏಕಾಏಕಿ ಸಾವಿರಾರು ಜನರು ಕುಳಿತಿದ್ದ ಸ್ಟ್ಯಾಂಡ್ ವೊಂದು ಕುಸಿದುಬಿದ್ದಿದೆ. ಸ್ಟ್ಯಾಂಡ್ ಕುಸಿದುಬೀಳುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ವಿಶೇಷ ಚಿಕಿತ್ಸೆಗಾಗಿ ಹೈದರಾಬಾದ್ ಗೆ ಸ್ಥಳಾಂತರಿಸಲಾಗಿದೆ.

ಕ್ರೀಡಾ ಸ್ಪರ್ಧೆಯನ್ನು ತೆಲಂಗಾಣ ಕಬಡ್ಡಿ ಸಂಸ್ಥೆಯು ಸೂರ್ಯಪೇಟೆಯ ಕಬಡ್ಡಿ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿತ್ತು. ಇಂದು ಉದ್ಘಾಟನೆಯಾಗಿರುವ ಟೂರ್ನಿಯು ಮಾರ್ಚ್ 25ರ ತನಕ ನಿಗದಿಯಾಗಿತ್ತು.

ಸೂರ್ಯಪೇಟ್ ನಲ್ಲಿ ಮೂರು ಸ್ಟ್ಯಾಂಡ್ ಗಳನ್ನು ನಿರ್ಮಿಸಲಾಗಿತ್ತು. ಪ್ರತಿ ಸ್ಟ್ಯಾಂಡ್  ಸುಮಾರು 5,000 ಜನರ ಸಾಮರ್ಥ್ಯ ಹೊಂದಿತ್ತು. ಮೈದಾನವು ಒಟ್ಟು 15,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.

ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ 29 ರಾಜ್ಯಗಳ 1500ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News