ಎರಡನೇ ಏಕದಿನ: ಭಾರತ ವಿರುದ್ಧ ಇಂಗ್ಲೆಂಡ್ ಜಯಭೇರಿ, ಸರಣಿ ಸಮಬಲ

Update: 2021-03-26 16:00 GMT
ಜಾನಿ ಬೈರ್ ಸ್ಟೋವ್

ಪುಣೆ: ಆರಂಭಿಕ ಬ್ಯಾಟ್ಸ್ ಮನ್ ಜಾನಿ ಬೈರ್ ಸ್ಟೋವ್(124, 112 ಎಸೆತ)ಶತಕ, ಬೆನ್ ಸ್ಟೋಕ್ಸ್ (99, 52 ಎಸೆತ)ಹಾಗೂ ಜೇಸನ್ ರಾಯ್ (55, 52 ಎಸೆತ) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ 2ನೇ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯವನ್ನು 6 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ಗೆಲಲ್ಲು 337 ರನ್ ಯಶಸ್ವಿಯಾಗಿ ಬೆನ್ನಟ್ಟಿದ ಇಂಗ್ಲೆಂಡ್ 43.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಇನಿಂಗ್ಸ್ ಆರಂಭಿಸಿದ ಜೇಸನ್ ರಾಯ್ ಹಾಗೂ ಬೈರ್ ಸ್ಟೋವ್(124 ರನ್, 112 ಎಸೆತ, 11 ಬೌಂ.,7 ಸಿ.)ಮೊದಲ ವಿಕೆಟ್ ಗೆ 110 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ರಾಯ್ ಔಟಾದ ಬಳಿಕ ಬೈರ್ ಸ್ಟೋವ್ ಜೊತೆ ಕೈಜೋಡಿಸಿದ ಸ್ಟೋಕ್ಸ್(99, 52 ಎಸೆತ, 4 ಬೌಂಡರಿ, 10 ಸಿಕ್ಸರ್)2ನೇ ವಿಕೆಟ್ ಗೆ 175 ರನ್ ಸೇರಿಸಿ ತಂಡದ ರನ್ ಚೇಸಿಂಗ್ ಗೆ ಶಕ್ತಿ ತುಂಬಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಭಾರತ ರಾಹುಲ್ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 336 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News