ಯೂಸುಫ್ ಪಠಾಣ್ ಗೆ ಕೊರೋನ ಪಾಸಿಟಿವ್
Update: 2021-03-27 21:39 IST
ಹೊಸದಿಲ್ಲಿ: ತನಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಶನಿವಾರ (ಮಾರ್ಚ್ 27) ಟ್ವೀಟ್ ಮೂಲಕ ತಿಳಿಸಿದ್ದಾರೆ.
ತನಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ ಎಂದು ಇಂದು ಬೆಳಗ್ಗೆ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಬಹಿರಂಗಪಡಿಸಿದ್ದರು.
“ಕೋವಿಡ್-19ನ ಸೌಮ್ಯ ರೋಗ ಲಕ್ಷಣವಿದ್ದ ಕಾರಣ ಪರೀಕ್ಷೆಗೆ ಒಳಗಾಗಿದ್ದೆ. ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದೆ. ನಾನು ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವೆ ಹಾಗೂ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳು, ಔಷಧಿಗಳನ್ನು ತೆಗೆದುಕೊಂಡಿದ್ದೇನೆ”ಎಂದು ಇತ್ತೀಚೆಗೆ ರೋಡ್ ಸೇಫ್ಟಿ ಸಿರೀಸ್ ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡಕ್ಕಾಗಿ ಆಡಿದ್ದ ಪಠಾಣ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಆದಷ್ಟು ಬೇಗನೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುವೆ ಎಂದು ಯೂಸುಪ್ ತಿಳಿಸಿದ್ದಾರೆ.