ಲೆಬನಾನ್ ‘ಟೈಟಾನಿಕ್’ನಂತೆ ಮುಳುಗಲಿದೆ: ಸ್ಪೀಕರ್ ಎಚ್ಚರಿಕೆ

Update: 2021-03-29 17:03 GMT
ಫೋಟೊ ಕೃಪೆ: twitter.com/

ಬೈರೂತ್ (ಲೆಬನಾನ್), ಮಾ. 29: ಸರಕಾರವೊಂದನ್ನು ಸ್ಥಾಪಿಸಲು ಸಾಧ್ಯವಾಗದಿದ್ದರೆ ಲೆಬನಾನ್ ಟೈಟಾನಿಕ್ ಹಡಗಿನಂತೆ ಮುಳುಗಲಿದೆ ಎಂದು ದೇಶದ ಸಂಸತ್‌ನ ಸ್ಪೀಕರ್ ನಬಿಹ್ ಬೆರಿ ಹೇಳಿದ್ದಾರೆ.

ಸಂಸತ್‌ನಲ್ಲಿ ಇನ್ನೆರಡು ತಿಂಗಳ ಕಾಲ ಅಕ್ಷರಶಃ ದೀಪ ಉರಿಯುವಂತೆ ಮಾಡುವುದಕ್ಕಾಗಿ ತುರ್ತು ನಿಧಿಯನ್ನು ಅಂಗೀಕರಿಸಲು ಕರೆಯಲಾದ ಸಂಸತ್ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.

 ನೂತನ ಸರಕಾರವೊಂದು ಸ್ಥಾಪನೆಯಾಗದೆ ಲೆಬನಾನ್ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಹೊಸ ಸರಕಾರವಿಲ್ಲದೆ ವಿದೇಶಿ ಸಾಲ ಪಡೆಯಲು ಅಗತ್ಯವಾದ ಆರ್ಥಿಕ ಸುಧಾರಣೆಗಳನ್ನು ಅಂಗೀಕರಿಸಲು ಲೆಬನಾನ್‌ಗೆ ಸಾಧ್ಯಾಗುತ್ತಿಲ್ಲ.

ಹೊಸ ಸಚಿವ ಸಂಪುಟ ರಚನೆ ವಿಚಾರದಲ್ಲಿ ನಿಯೋಜಿತ ಪ್ರಧಾನಿ ಸಅದ್ ಅಲ್ ಹರೀರಿ ಮತ್ತು ಅಧ್ಯಕ್ಷ ಮೈಕಲ್ ಔನ್ ಭಿನ್ನಾಭಿಪ್ರಾಯ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News