ಗಾಯದಿಂದ ಚೇತರಿಸಿಕೊಂಡ ಕುಸ್ತಿಪಟು ಅನ್ಶು ಮಲಿಕ್
ಹೊಸದಿಲ್ಲಿ: ಭರವಸೆಯ ಫ್ರೀಸ್ಟೈಲ್ ಕುಸ್ತಿಪಟು ಅನ್ಶು ಮಲಿಕ್ ಅವರು ಈ ತಿಂಗಳ ಮೊದಲ ವಾರದಲ್ಲಿ ಕಾಣಿಸಿಕೊಂಡ ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅವಕಾಶ ಕಾಯ್ದಿರಿಸಲು ಉತ್ಸುಕರಾಗಿದ್ದಾರೆ.
ಮಾರ್ಚ್ 4ರಿಂದ 7ರವರೆಗೆ ರೋಮ್‌ನಲ್ಲಿ ನಡೆದ ಮ್ಯಾಟಿಯೊ ಪೆಲಿಕೋನ್ ವರ್ಲ್ಡ್ ರ್ಯಾಂಕಿಂಗ್ ಸರಣಿಯಲ್ಲಿ 19 ಹರೆಯದ ಮಲಿಕ್ ಮಹಿಳೆಯರ 57ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕದ ಪಂದ್ಯದಿಂದ ಹಿಂದೆ ಸರಿಯಬೇಕಾಯಿತು.
ಹರ್ಯಾಣದ ನಿಡಾನಿಯ ಅಂತರ್‌ರಾಷ್ಟ್ರೀಯ ಕುಸ್ತಿಪಟು ಕಳೆದ ವಾರ ಲಕ್ನ್ನೊದಲ್ಲಿ ನಡೆದ ಏಶ್ಯನ್ ಒಲಿಂಪಿಕ್ ಅರ್ಹತಾ ಪಂದ್ಯದ ರಾಷ್ಟ್ರೀಯ ಆಯ್ಕೆ ಪ್ರಯೋಗಗಳಲ್ಲಿ ಜಯಗಳಿಸಿದರು. ಎಪ್ರಿಲ್ 9ರಿಂದ 18ರವರೆಗೆ ಕಝಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವು ಟೋಕಿಯೊ ಒಲಿಂಪಿಕ್ಸ್ ಗೆ ಮಲಿಕ್ ತನ್ನ ಟಿಕೆಟ್‌ನ್ನು ದೃಢಪಡಿಸುತ್ತದೆ.
2019ರ ಒಲಿಂಪಿಕ್ ಅರ್ಹತಾ ಚಕ್ರದಲ್ಲಿ, ಮಹಿಳಾ 53 ಕೆ.ಜಿ.ಯಲ್ಲಿ ವಿನೇಶ್ ಫೋಗಾಟ್ ಒಲಿಂಪಿಕ್ ಕೋಟಾ ಸ್ಥಾನವನ್ನು ಗೆದ್ದಿದ್ದರು. ಇತರ ಉನ್ನತ ಮಹಿಳಾ ಕುಸ್ತಿಪಟುಗಳು 2019ರ ಋತುವಿನಲ್ಲಿ ಯಶಸ್ವಿಯಾಗಲಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020ರ ಋತುವಿನಲ್ಲಿ ಅಡ್ಡಿಪಡಿಸಿದ ನಂತರ ಅರ್ಹತಾ ವ್ಯವಸ್ಥೆಯು ಮತ್ತೆ ಪ್ರಾರಂಭವಾಗಿದೆ. ಏಶ್ಯನ್ ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿ ಏಶ್ಯದ ದೇಶಗಳಿಗೆ ಮೊದಲನೆಯದು.
ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಇತರ ಮೂರು ಕೋಟಾ 2019ರಲ್ಲಿ ಭರ್ತಿಯಾಗಿತ್ತು. ಟೋಕಿಯೊಗೆ ಅವಕಾಶ ಕಾಯ್ದಿರಿಸುವಲ್ಲಿ ಬಜರಂಗ್ ಪೂನಿಯಾ (65 ಕೆ.ಜಿ), ರವಿ ದಹಿಯಾ (57 ಕೆ.ಜಿ.), ಮತ್ತು ದೀಪಕ್ ಪುನಿಯಾ (86 ಕೆ.ಜಿ.) ಯಶಸ್ವಿಯಾದರು.
2019 ರಲ್ಲಿ ಸೀನಿಯರ್ ವಿಭಾಗಕ್ಕೆ ಭಡ್ತಿ ಪಡೆದ ನಂತರ ಮಲಿಕ್ ತನ್ನ ಸಾಮರ್ಥ್ಯದ ಬಗ್ಗೆ ಉತ್ತಮ ವಿವರ ನೀಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಹೊಸದಿಲ್ಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದಾರೆ.