×
Ad

ಕೆನಡ: ಯುವಕರಿಗೆ ಆ್ಯಸ್ಟ್ರಝೆನೆಕ ಲಸಿಕೆ ಸ್ಥಗಿತ

Update: 2021-03-30 23:12 IST

ಒಟ್ಟಾವ (ಕೆನಡ), ಮಾ. 30: ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿಯ ಕೊರೋನ ವೈರಸ್ ಲಸಿಕೆಯನ್ನು ಯುವ ಜನರಿಗೆ ನೀಡುವುದನ್ನು ಕೆನಡ ಸ್ಥಗಿತಗೊಳಿಸಿದೆ. ಕೆಲವು ಪ್ರಕರಣಗಳಲ್ಲಿ ಲಸಿಕೆಯು ರಕ್ತಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.

ಲಸಿಕೆಯನ್ನು 55 ವರ್ಷದ ಕೆಳಗಿನ ವ್ಯಕ್ತಿಗಳಿಗೆ ನೀಡುವುದನ್ನು ನಿಲ್ಲಿಸುವಂತೆ ಕೆನಡದ ಲಸಿಕೆ ಸಲಹಾ ಸಮಿತಿ ಶಿಫಾರಸು ಮಾಡಿದ ಬಳಿಕ, ಒಂಟಾರಿಯೊ, ಕ್ಯೂಬೆಕ್, ಬ್ರಿಟಿಶ್ ಕೊಲಂಬಿಯ ಮತ್ತು ಆಲ್ಬರ್ಟ ರಾಜ್ಯಗಳಲ್ಲಿ ಆ್ಯಸ್ಟ್ರಝೆನೆಕ ಲಸಿಕೆ ನೀಡಿಕೆಯನ್ನು ಆರೋಗ್ಯ ಅಧಿಕಾರಿಗಳು ನಿಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News