ಫ್ರಾನ್ಸ್: 3ನೇ ರಾಷ್ಟ್ರೀಯ ಲಾಕ್‌ಡೌನ್ ಘೋಷಿಸಿದ ಮ್ಯಾಕ್ರೋನ್

Update: 2021-04-01 16:22 GMT

ಪ್ಯಾರಿಸ್ (ಫ್ರಾನ್ಸ್), ಎ. 1: ಕೊರೋನ ವೈರಸ್‌ನ ಮೂರನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಬುಧವಾರ ಮೂರನೇ ಬಾರಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ.

ಶಾಲೆಗಳು ಮೂರು ವಾರಗಳ ಕಾಲ ಮುಚ್ಚಲ್ಪಡುವುದು ಎಂದು ಅವರು ಹೇಳಿದ್ದಾರೆ.

 ದೇಶದಲ್ಲಿ ಕೊರೋನ ವೈರಸ್‌ನಿಂದಾಗಿ ಸತ್ತವರ ಸಂಖ್ಯೆ ಒಂದು ಲಕ್ಷವನ್ನು ಸಮೀಪಿಸುತ್ತಿದ್ದು, ಆಸ್ಪತ್ರೆಗಳು ಕೊರೋನ ಸೋಂಕಿತರಿಂದ ತುಂಬಿ ತುಳುಕುತ್ತಿರುವಂತೆಯೇ ಮ್ಯಾಕ್ರೋನ್ ಈ ನಿರ್ಧಾರ ಘೋಷಿಸಿದ್ದಾರೆ. ಆರ್ಥಿಕತೆಯನ್ನು ರಕ್ಷಿಸುವುದಕ್ಕಾಗಿ ದೇಶವನ್ನು ತೆರೆದೇ ಇಡುವ ತನ್ನ ಮೊದಲಿನ ನಿರ್ಧಾರದಿಂದ ಅವರು ಈ ಮೂಲಕ ಹಿಂದೆ ಸರಿದಿದ್ದಾರೆ.

‘‘ಈಗ ನಾವು ಕ್ರಮ ತೆಗೆದುಕೊಳ್ಳದಿದ್ದರೆ ನಿಯಂತ್ರಣ ನಮ್ಮ ಕೈಯಲ್ಲಿರುವುದಿಲ್ಲ’’ ಎಂದು ರಾಷ್ಟ್ರವನ್ನುದ್ದೇಶಿಸಿ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

ಲಾಕ್‌ಡೌನ್ ಶನಿವಾರದಿಂದ ಒಂದು ತಿಂಗಳ ಕಾಲ ದೇಶಾದ್ಯಂತ ಜಾರಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News