ಜಾನ್ಸನ್ ಕಂಪೆನಿಯ 1.5 ಕೋಟಿ ಕೊರೋನ ಲಸಿಕೆ ಡೋಸ್ ವ್ಯರ್ಥ
Update: 2021-04-01 22:29 IST
ವಾಶಿಂಗ್ಟನ್, ಎ. 1: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿ ತಯಾರಿಸಿರುವ ಸುಮಾರು 1.5 ಕೋಟಿ ಕೊರೋನ ವೈರಸ್ ಲಸಿಕೆಯ ಡೋಸ್‌ಗಳು ಕಾರ್ಖಾನೆಯೊಂದರ ತಪ್ಪಿನಿಂದಾಗಿ ವ್ಯರ್ಥವಾಗಿವೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ಇದು ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸುವ ಕಂಪೆನಿಯ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಕೊರೋನ ವೈರಸ್ ತಡೆಯಲು ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯ ಒಂದೇ ಡೋಸ್ ಸಾಕಾಗುತ್ತದೆ.
ಬಾಲ್ಟಿಮೋರ್‌ನಲ್ಲಿರುವ ಔಷಧ ತಯಾರಿಕಾ ಕಾರ್ಖಾನೆಯೊಂದರಲ್ಲಿ ಉತ್ಪಾದನೆಯಾಗಿರುವ ನಿರ್ದಿಷ್ಟ ಬ್ಯಾಚ್‌ನ ಲಸಿಕೆಗಳ ತಯಾರಿಯಲ್ಲಿ ಸರಿಯಾದ ಮಾನದಂಡಗಳನ್ನು ಬಳಸಿಲ್ಲದಿರುವುದು ಗಮನಕ್ಕೆ ಬಂದಿದೆ ಎಂದು ಕಂಪೆನಿಯ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.