ರಶ್ಯನ್ ಓಪನ್, ಇಂಡೋನೇಶ್ಯ ಮಾಸ್ಟರ್ಸ್ ರದ್ದು

Update: 2021-04-06 04:17 GMT

ಹೊಸದಿಲ್ಲಿ: ಎರಡು ಸೂಪರ್ 100 ಬ್ಯಾಡ್ಮಿಂಟನ್ ಪಂದ್ಯಾವಳಿಗಳಾದ ರಶ್ಯನ್ ಓಪನ್ 2021 ಮತ್ತು ಇಂಡೋನೇಶ್ಯ ಮಾಸ್ಟರ್ಸ್ ಟೂರ್ನಿ ಕೋವಿಡ್ -19 ಸಂಬಂಧಿತ ನಿರ್ಬಂಧಗಳಿಂದಾಗಿ ರದ್ದುಗೊಂಡಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್‌ಫೆಡರೇಶನ್ (ಬಿಡಬ್ಲುಎಫ್) ಸೋಮವಾರ ತಿಳಿಸಿದೆ.

  ‘‘ಈಗಿರುವ ಕೋವಿಡ್-19 ನಿರ್ಬಂಧಗಳು ಮತ್ತು ತೊಡಕುಗಳ ಕಾರಣದಿಂದಾಗಿ ಸ್ಥಳೀಯ ಸಂಘಟಕರಿಗೆ ಪಂದ್ಯಾವಳಿಗಳನ್ನು ರದ್ದುಗೊಳಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಬಿಡಬ್ಲುಎಫ್ ಹೇಳಿಕೆಯಲ್ಲಿ ತಿಳಿಸಿದೆ.

ನ್ಯಾಶನಲ್ ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ರಶ್ಯ ಮತ್ತು ಬ್ಯಾಡ್ಮಿಂಟನ್ ಇಂಡೋನೇಶ್ಯದ ಜೊತೆ ಸಮಾಲೋಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಡಬ್ಲುಎಫ್ ತಿಳಿಸಿದೆ. ವ್ಲಾಡಿವೋಸ್ಟಾಕ್‌ನಲ್ಲಿ ರಶ್ಯನ್ ಓಪನ್ ಜುಲೈ 20 ರಿಂದ 25ರ ತನಕ ಮತ್ತು ಅಕ್ಟೋಬರ್ 5ರಿಂದ 10ರ ತನಕ ಇಂಡೋನೇಶ್ಯ ಮಾಸ್ಟರ್ಸ್ ನಿಗದಿಯಾಗಿತ್ತು.

 ಜೂನ್‌ನಲ್ಲಿ ನಡೆಯಬೇಕಿದ್ದ ಕೆನಡಾ ಓಪನ್ ಕೂಡ ರದ್ದುಗೊಂಡಿದೆ. ಮತ್ತೊಂದು ಸೂಪರ್ 100 ಈವೆಂಟ್ ಹೈದರಾಬಾದ್ ಓಪನ್ ಆಗಸ್ಟ್ 24ರಿಂದ 29 ರವರೆಗೆ ನಿಗದಿಯಾಗಿದೆ. ಆದರೆ ಭಾರತದಲ್ಲಿ ಕೋವಿಡ್ -19 ಪರಿಸ್ಥಿತಿಯಿಂದಾಗಿ ಇದು ನಡೆಯುತ್ತದೆಯೋ ಇಲ್ಲವೋ ಎಂಬುದನ್ನು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News