ಭಾರತದ ವನಿತೆಯರಿಗೆ ಸೋಲು

Update: 2021-04-06 04:22 GMT

  ತಾಷ್ಕೆಂಟ್: ಭಾರತದ ಮಹಿಳಾ ಫುಟ್ಬಾಲ್ ತಂಡ ಇಲ್ಲಿ ನಡೆದ ಸ್ನೇಹಪರ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ 0-1 ಗೋಲುಗಳಿಂದ ಸೋಲನುಭವಿಸಿದೆ.

  ಮಾಫ್ಟುನಾ ಶೋಯಿಮೋವಾ ತಡವಾಗಿ ಗೋಲು ಜಮೆ ಮಾಡಿ ಉಜ್ಬೇಕಿಸ್ತಾನ್ ತಂಡದ ಗೆಲುವಿಗೆ ನೆರವಾದರು. ಎರಡೂ ತಂಡಗಳು ಸಾಕಷ್ಟು ಸ್ಕೋರಿಂಗ್ ಅವಕಾಶಗಳನ್ನು ಸೃಷ್ಟಿಸಿದ್ದವು. ಆದರೆ ಉಜ್ಬೇಕಿಸ್ತಾನ್ ತಂಡ ಮಾತ್ರ ಏಕೈಕ ಗೋಲು ಗಳಿಸಲು ಶಕ್ತವಾಗಿದೆ. ಪ್ರಥಮಾರ್ಧದಲ್ಲಿ ಉಭಯ ತಂಡಗಳು 0-0 ಸಮಬಲ ಸಾಧಿಸಿದ್ದವು. ದ್ವಿತಿಯಾರ್ಧದಲ್ಲೂ ಅದೇ ಪ್ರದರ್ಶನ ಮುಂದುವರಿಯಿತು.ಆದರೆ ಕೊನೆಯಲ್ಲಿ ಉಜ್ಬೇಕಿಸ್ತಾನ ಗೋಲು ಖಾತೆ ತೆರೆಯಿತು. ಭಾರತ ತಂಡವು ಗುರುವಾರ 2ನೇ ಸ್ನೇಹಪರ ಪಂದ್ಯದಲ್ಲಿ ಬೆಲಾರಸ್ ವಿರುದ್ಧ ಸೆಣಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News