ಸತತ ಎರಡನೇ ಶತಕ ಸಿಡಿಸಿದ ಫಾಖರ್ ಝಮಾನ್

Update: 2021-05-05 08:14 GMT

ಸೆಂಚೂರಿಯನ್(ದ.ಆಫ್ರಿಕಾ): ಸತತ ಎರಡನೇ ಶತಕ ಸಿಡಿಸಿದ ಫಾಖರ್  ಝಮಾನ್ ಹಾಗೂ ನಾಯಕ ಬಾಬರ್ ಆಝಂ ಗಳಿಸಿದ 94 ರನ್ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 320 ರನ್ ಗಳಿಸಿದೆ.

ಫಾಖರ್  ಝಮಾನ್ ಮತ್ತೊಮ್ಮೆ ಬಿರುಸಿನ ಬ್ಯಾಟಿಂಗ್ ಮಾಡಿದರು. 104 ಎಸೆತಗಳಲ್ಲಿ 101 ರನ್ ಗಳಿಸಿದರು. ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಚೆಂಡಾಡಿದ್ದ ಝಮಾನ್ ಬುಧವಾರ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿದ್ದರು.

ಫಾಖರ್ ಹಾಗೂ ಇಮಾಮ್ ವುಲ್ ಹಕ್(57) ಮೊದಲ ವಿಕೆಟ್ ಗೆ 112 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

ಫಾಖರ್  99 ಎಸೆತಗಳಲ್ಲಿ ಶತಕ ಪೂರೈಸಿದರು. ಜೋಹಾನ್ಸ್ ಬರ್ಗ್ ನಲ್ಲಿ 91 ಎಸೆತಗಳಲ್ಲಿ 100 ರನ್ ಗಳಿಸಿ ಮಿಂಚಿದ್ದರು.101 ರನ್ ಗಳಿಸಿ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಗೆ ವಿಕೆಟ್ ಒಪ್ಪಿಸಿದ ಫಾಖರ್  ಅವರ 104 ಎಸೆತಗಳ ಇನಿಂಗ್ಸ್ ನಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಗಳಿದ್ದವು.

94 ರನ್ ಗಳಿಸಿರುವ ಆಝಮ್ 82 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಿಡಿಸಿದರು.  ಇಮಾಮ್ ವುಲ್ ಹಕ್ (57 ರನ್,73 ಎಸೆತ, 3 ಬೌಂ.)ತಾಳ್ಮೆಯ ಅರ್ಧಶತಕ ಸಿಡಿಸಿದರು. ಆಫ್ರಿಕದ ಪರ ಕೇಶವ ಮಹಾರಾಜ್ (3-45) ಹಾಗೂ ಏಡೆನ್ ಮರ್ಕರಮ್ (2-48)ಐದು ವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News