ಮೊಯಿನ್ ಅಲಿ ಕುರಿತು ತಸ್ಲೀಮಾ ನಸ್ರೀನ್ ಹೇಳಿಕೆಯ ವಿರುದ್ಧ ಸಿಡಿದೆದ್ದ ಇಂಗ್ಲೆಂಡ್ ಕ್ರಿಕೆಟಿಗರು

Update: 2021-04-07 16:46 GMT

ಹೊಸದಿಲ್ಲಿ:  ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಮೊಯಿನ್ ಅಲಿ ಕುರಿತಾದಂತೆ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್‌ ಟ್ವೀಟ್‌ ಮಾಡಿದ ಕುರಿತಾದಂತೆ ಇಂಗ್ಲೆಂಡ್‌ ತಂಡದ ಪ್ರಮುಖ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್‌, "ಮೊಯಿನ್‌ ಅಲಿ ಒಂದು ವೇಳೆ ಕ್ರಿಕೆಟ್‌ ನಲ್ಲಿ ಬಾಕಿಯಾಗದಿದ್ದಲ್ಲಿ ಸಿರಿಯಾಗೆ ತೆರಳಿ ಐಸಿಸ್‌ ಸೇರಿಕೊಳ್ಳುತ್ತಿದ್ದರು" ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಭಾರೀ ವಿವಾದ ಸೃಷ್ಟಿಸಿದ್ದು, ಆಕೆಯ ಖಾತೆಯನ್ನು ರಿಪೋರ್ಟ್‌ ಮಾಡುವಂತೆ ಆಟಗಾರರು ವಿನಂತಿಸಿಕೊಂಡಿದ್ದರು. ತನ್ನ ಟ್ವೀಟ್‌ ಅನ್ನು ಅಮರ್ಥನೆ ಮಾಡುತ್ತಿರುವಂತೆಯೇ ಹೆಚ್ಚುತ್ತಿರುವ ವಿರೋಧದ ಕಾರಣ ಬಳಿಕ ಪೋಸ್ಟ್‌ ಡಿಲೀಟ್‌ ಮಾಡಿದ್ದರು.

ಮೊಯಿನ್‌ ಅಲಿ ಕುರಿತಾದಂತೆ ಅಸಹಿಷ್ಣುತೆಯ ಪೋಸ್ಟ್‌ ಕುರಿತು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಸದಸ್ಯರಾದ ಜೋಫ್ರಾ ಆರ್ಚರ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಸಾಬಿಖ್‌ ಮಹ್ಮೂದ್‌, ಬೆನ್‌ ಡಕೆಟ್‌, ರಿಯಾನ್‌ ಸೈಡ್‌ ಬಾಟಮ್‌ ಮುಂತಾದವರು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಕೆಲವು ತಿಂಗಳುಗಳ ಹಿಂದೆ ಉತ್ತರಾಖಂಡ ಕ್ರಿಕೆಟ್‌ ಕೋಚ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಸೀಂ ಜಾಫರ್‌ ರನ್ನು ಸ್ಮರಿಸಿದ್ದಾರೆ. "ಮೊಯಿನ್‌ ಅಲಿ ವಿರುದ್ಧ ಅಸಹಿಷ್ಣುತೆಯ ಹೇಳಿಕೆಗಳು ಬಂದಾಗ ಇಂಗ್ಲೆಂಡ್‌ ತಂಡದ ಆಟಗಾರರು ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ ಅವರು ಸುಸಂಸ್ಕೃತ ಸಮಾಜದಿಂದ ಬಂದವರು. ಆದರೆ ನಮ್ಮದೇ ಭಾರತದ ವಸೀಂ ಜಾಫರ್‌ ವಿರುದ್ಧ ದಾಳಿ ನಡೆದಾಗ ಭಾರತೀಯ ಕ್ರಿಕೆಟಿಗರೆಲ್ಲರೂ ಬಾಯಿ ಮುಚ್ಚಿಕೊಂಡು ಕುಳಿತಿದ್ದರು. ಏಕೆಂದರೆ ನಾವೀಗ ಫ್ಯಾಸಿಸ್ಟ್‌ ಆಡಳಿತದಲ್ಲಿದ್ದೇವೆ" ಎಂದು ಸಿದ್ದಾರ್ಥ್‌ ಎಂಬ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.

ಇಂಗ್ಲಿಷ್‌ ಕ್ರಿಕೆಟಿಗರು ತಮ್ಮ ತಂಡದ ಸದಸ್ಯನಿಗಾದ ದಾಳಿಯ ಕುರಿತು ಎದ್ದು ನಿಂತು ಮಾತನಾಡುವುದನ್ನು ನೋಡುವಾಗ ಹೆಮ್ಮೆಯೆನಿಸುತ್ತದೆ. ಆದರೆ ವಸೀಂ ಜಾಫರ್‌ ಕುರಿತು ಮಾತನಾಡಲು ಒಬ್ಬನೇ ಒಬ್ಬ ಭಾರತೀಯ ಕ್ರಿಕೆಟಿಗನಿಗೂ ಬೆನ್ನೆಲುಬು ಇರಲಿಲ್ಲವೇ" ಎಂದು ಬಳಕೆದಾರರೋರ್ವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News