2019ರಲ್ಲಿ 53 ಕೋಟಿ ಫೇಸ್‌ಬುಕ್ ಬಳಕೆದಾರರ ದತ್ತಾಂಶ ಕಳವು

Update: 2021-04-07 18:09 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಎ. 7: 2019ರಲ್ಲಿ ಕನ್ನಗಾರರು ಸುಮಾರು 50 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಳವು ಮಾಡಿದ್ದಾರೆ ಎಂದು ಫೇಸ್‌ಬುಕ್ ಮಂಗಳವಾರ ಹೇಳಿದೆ. ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್‌ಗಳನ್ನು ಬಳಸಿಕೊಂಡು ಸುಲಭವಾಗಿ ಸ್ನೇಹಿತರನ್ನು ಪತ್ತೆಹಚ್ಚಲು ನೆರವಾಗುವುದಕ್ಕಾಗಿ ರೂಪಿಸಲಾಗಿದ್ದ ಟೂಲ್ ಒಂದನ್ನು ಬಳಸಿಕೊಂಡು ಕನ್ನಗಾರರು ದಾಳಿ ಮಾಡಿದ್ದರು ಎಂದು ಅದು ತಿಳಿಸಿದೆ.

53 ಕೋಟಿಗೂ ಅಧಿಕ ಫೇಸ್‌ಬುಕ್ ಬಳಕೆದಾರರ ಮಾಹಿತಿಗಳನ್ನು ಕಳೆದ ವಾರಾಂತ್ಯದಲ್ಲಿ ‘ಹ್ಯಾಕರ್ ಫೋರಂ’ ಒಂದರಲ್ಲಿ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ವಿವರಣೆ ನೀಡಿದೆ ಹಾಗೂ ಖಾಸಗಿ ಸೆಟ್ಟಿಂಗ್‌ಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಬಳಕೆದಾರರಿಗೆ ಎಚ್ಚರಿಸಿದೆ.

‘‘ಹ್ಯಾಕರ್‌ಗಳು ನಮ್ಮ ಸಿಸ್ಟಮ್‌ಗೆ ಕನ್ನ ಹಾಕಿ ಈ ಅಂಕಿಅಂಶಗಳನ್ನು ಪಡೆಯಲಿಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. 2019 ಸೆಪ್ಟಂಬರ್‌ಗೂ ಮೊದಲು ನಮ್ಮ ಪ್ಲಾಟ್‌ಫಾರ್ಮ್ ಮೂಲಕ ಪ್ರವೇಶಿಸಿ ಅದನ್ನು ಪಡೆದುಕೊಂಡಿದ್ದರು’’ ಎಂದು ಫೇಸ್‌ಬುಕ್ ಉತ್ಪನ್ನ ನಿರ್ವಹಣೆ ನಿರ್ದೇಶಕ ಮೈಕ್ ಕ್ಲಾರ್ಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News