ಐಪಿಎಲ್: ಕೋಲ್ಕತಾ ನೈಟ್ ರೈಡರ್ಸ್ 187/6

Update: 2021-04-11 15:55 GMT
ನಿತೀಶ್ ರಾಣಾ

ಚೆನ್ನೈ: ಆರಂಭಿಕ ಬ್ಯಾಟ್ಸ್ ಮನ್ ನಿತೀಶ್ ರಾಣಾ (80, 56 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ರಾಹುಲ್ ತ್ರಿಪಾಠಿ(53, 29 ಎಸೆತ, 5 ಬೌಂ.2 ಸಿ.) ಅವರ ಭರ್ಜರಿ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿದೆ.

ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್  ಗೆ ಇಳಿಸಲ್ಟಟ್ಟ ಕೆಕೆಆರ್ ಗೆ ರಾಣಾ ಹಾಗೂ ಶುಭಮನ್ ಗಿಲ್(15) ಮೊದಲ ವಿಕೆಟ್ ಗೆ 53 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಗಿಲ್ ಔಟಾದ ಬಳಿಕ ಜೊತೆಯಾದ ರಾಣಾ ಹಾಗೂ ತ್ರಿಪಾಠಿ 2ನೇ ವಿಕೆಟ್ ಗೆ 93 ರನ್ ಸೇರಿಸಿ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು.

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ (ಔಟಾಗದೆ 22, 9 ಎಸೆತ)ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.

ಹೈದರಾಬಾದ್ ಪರವಾಗಿ ಮುಹಮ್ಮದ್ ನಬಿ(2-32) ಹಾಗೂ ರಶೀದ್ ಖಾನ್(2-24)ತಲಾ ಎರಡು ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News