ರಶ್ಯದೊಂದಿಗೆ ಸಂಘರ್ಷ: ಟರ್ಕಿಯತ್ತ ತಿರುಗಿದ ಯುಕ್ರೇನ್

Update: 2021-04-11 18:10 GMT

ಅಂಕಾರ (ಟರ್ಕಿ), ಎ. 11: ಟರ್ಕಿ ಮತ್ತು ಯುಕ್ರೇನ್ ದೇಶಗಳ ನಡುವಿನ ರಕ್ಷಣಾ ಭಾಗೀದಾರಿಕೆಗೆ 10 ವರ್ಷಗಳು ತುಂಬಿದ ಸಂದರ್ಭದಲ್ಲಿ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ ಝೆಲೆನ್‌ಸ್ಕಿ ವಾರಾಂತ್ಯದಲ್ಲಿ ಟರ್ಕಿಗೆ ಭೇಟಿ ನೀಡಿದ್ದಾರೆ.

 ಡೊಂಬಾಸ್ ವಲಯದಲ್ಲಿ ರಶ್ಯ ಬೆಂಬಲಿತ ಬಂಡುಕೋರರು ಮತ್ತು ಯುಕ್ರೇನ್ ಸೈನಿಕರ ನಡುವಿನ ಯುದ್ಧ ತೀವ್ರಗೊಳ್ಳುತ್ತಿರುವಂತೆಯೇ, ಯುಕ್ರೇನ್ ಅಧ್ಯಕ್ಷರು ಬೆಂಬಲ ಕೋರಿ ನೆರೆಯ ದೇಶ ಟರ್ಕಿಗೆ ಬಂದಿದ್ದಾರೆ.

‘‘ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಮರುಸ್ಥಾಪಿಸಲು ಟರ್ಕಿಯ ಬೆಂಬಲ ಅತ್ಯಗತ್ಯವಾಗಿದೆ’’ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಜೊತೆ ಜಂಟು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಝೆಲೆನ್‌ಸ್ಕಿ ಹೇಳಿದರು.

ಇದು ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಯುಕ್ರೇನ್ ಅಧ್ಯಕ್ಷರ ಎರಡನೇ ಟರ್ಕಿ ಪ್ರವಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News