ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಕ್ಕೆ ಆಘಾತ ನೀಡಿದ ಭಾರತ

Update: 2021-04-12 05:04 GMT

ಹೊಸದಿಲ್ಲಿ: ಎಫ್ ಐಎಚ್ ಹಾಕಿ ಪ್ರೊ ಲೀಗ್‍ನ ಮೊದಲ ಪಂದ್ಯವನ್ನು ಶೂಟೌಟ್ ಮೂಲಕ ರೋಚಕವಾಗಿ ಗೆದ್ದುಕೊಂಡಿದ್ದ  ಭಾರತದ ಪುರುಷರ ಹಾಕಿ ತಂಡವು ಎರಡನೇ ಪಂದ್ಯದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನ ತಂಡವನ್ನು  3-0 ಗೋಲುಗಳ ಅಂತರದಿಂದ ಸುಲಭವಾಗಿ ಸೋಲಿಸಿ ಶಾಕ್ ನೀಡಿದೆ.

ಬ್ಯುನಸ್ ಐರಿಸ್ ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಭಾರತದ ಪರವಾಗಿ ಹರ್ಮನ್ ಪ್ರೀತ್ ಸಿಂಗ್, ಲಲಿತ್ ಉಪಾಧ್ಯಾಯ ಹಾಗೂ ಮನ್ ದೀಪ್ ಸಿಂಗ್ ತಲಾ ಒಂದು ಗೋಲು ಗಳಿಸಿದರು. 

ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಅರ್ಜೆಂಟೀನ ವಿರುದ್ಧ 2-2 ರಿಂದ ಡ್ರಾ ಸಾಧಿಸಿದ್ದ ಭಾರತವು ಬಳಿಕ ಶೂಟೌಟ್ ನಲ್ಲಿ ಜಯ ಸಾಧಿಸಿತ್ತು. ಈ ಗೆಲುವಿನಿಂದ ಬೋನಸ್ ಅಂಕವನ್ನು ಪಡೆದಿತ್ತು.

ಅರ್ಜೆಂಟೀನ ವಿರುದ್ಧ ಜಯಭೇರಿ ಬಾರಿಸಿರುವ ಭಾರತವು ಎಫ್ ಐಎಚ್ ಹಾಕಿ ಪ್ರೊ ಲೀಗ್ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಕ್ಕಿಂತ ಒಂದು ಅಂಕ ಮುಂದಿದೆ. ಭಾರತ, ಅರ್ಜೆಂಟೀನ ಹಾಗೂ ಆಸ್ಟ್ರೇಲಿಯವು ಮುಂಬರುವ ಒಲಿಂಪಿಕ್ ಗೇಮ್ಸ್ ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News