ದ್ಯುತಿ ಚಂದ್ ವರ್ಲ್ಡ್ ರಿಲೇಗೆ ತಯಾರಿ ಆರಂಭ

Update: 2021-04-13 04:58 GMT

ಹೊಸದಿಲ್ಲಿ: ಮಹಿಳೆಯರ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ದ್ಯುತಿ ಚಂದ್ ಒಂದು ವಾರ ಕ್ವಾರಂಟೈನ್‌ನಲ್ಲಿ ಉಳಿಯುವ ಜೊತೆಗೆ ಐಸೋಲೇಶನ್‌ನಲ್ಲಿ ತರಬೇತಿ ನಡೆಸಲಿದ್ದಾರೆ. ಮುಂದಿನ ತಿಂಗಳ ವರ್ಲ್ಡ್ ರಿಲೇಯಲ್ಲಿ ತಯಾರಿ ನಡೆಸಲು ತಮ್ಮ ತರಬೇತಿ ತಾಣವನ್ನು ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ ಭುವನೇಶ್ವರಕ್ಕೆ ಸ್ಥಳಾಂತರಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ವರ್ಲ್ಡ್ ರಿಲೇಗೆ ಆಯ್ಕೆ ಮಾಡಿರುವ ಮಹಿಳೆಯರ 4100 ಮೀ. ರಿಲೇಯಲ್ಲಿ 25ರ ಹರೆಯದ ಒಡಿಶಾ ಓಟಗಾರ್ತಿ ಪ್ರಮುಖ ರನ್ನರ್ ಆಗಿದ್ದಾರೆ. ಪೊಲ್ಯಾಂಡ್‌ನಲ್ಲಿ ನಡೆಯಲಿರುವ ಈ ಸ್ಪರ್ಧೆಯು ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಾಗಿದೆ.

ನಾವು ಒಂದು ವಾರದಿಂದ ಒಳಾಂಗಣದಲ್ಲಿದ್ದೇವೆ. ದಿನದ ನಿರ್ದಿಷ್ಟ ಸಮಯದಲ್ಲಿ ಹೊರಗೆ ತರಬೇತಿ ನಡೆಸಲು ಹೋಗಬಹುದು. ನಾವೀಗ 6-7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದು, ಪ್ರಮುಖ ಸಿಂಥೆಟಿಕ್ ಟ್ರಾಕ್‌ನಲ್ಲಿ ಅಭ್ಯಾಸ ನಡೆಸಲು ನಮಗೆ ಸಾಧ್ಯವಿಲ್ಲ ಎಂದು ದ್ಯುತಿ ಅವರ ಕೋಚ್ ಎನ್. ರಮೇಶ್ ಪಟಿಯಾಲದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News