ಐಸಿಸಿ ರ‍್ಯಾಂಕಿಂಗ್:‌ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೇರಿದ ಬಾಬರ್‌ ಅಝಂ

Update: 2021-04-14 14:59 GMT

ಹೊಸದಿಲ್ಲಿ: ಐಸಿಸಿ ರ‍್ಯಾಂಕಿಂಗ್ ನಲ್ಲಿ ಬ್ಯಾಟ್ಸ್ ಮೆನ್ ಸಾಲಿನಲ್ಲಿ ಕಳೆದ ಮೂರು ವರ್ಷಗಳಿಗೂ ಹೆಚ್ಚು ಸಮಯದಿಂದ ಟಾಪ್ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರ ಸ್ಥಾನ ಈಗ ಪಾಕಿಸ್ತಾನಿ ಆಟಗಾರ ಬಾಬರ್ ಆಝಂ ಅವರಿಗೆ ಒಲಿದಿದೆ. ಆಝಂ ಅವರು ಈ ಸ್ಥಾನಕ್ಕೇರಿದ ಪಾಕಿಸ್ತಾನದ ನಾಲ್ಕನೇ ಆಟಗಾರರಾಗಿದ್ದಾರೆ.

ಇಪ್ಪತ್ತಾರು ವರ್ಷದ ಬಲಗೈ ದಾಂಡಿಗನಾಗಿರುವ ಬಾಬರ್ ಆಝಂ  ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ ಪಂದ್ಯದಲ್ಲಿ 82 ಬಾಲ್‍ಗಳಿಗೆ 94 ರನ್ ಪೇರಿಸಿದ  ನಂತರ ಅವರಿಗೆ 13 ಪಾಯಿಂಟ್‍ಗಳು ಲಭಿಸಿ ಅವರ ಒಟ್ಟು ಪಾಯಿಂಟ್‍ಗಳು 865ಗೆ ತಲುಪಿ ಅವರೀಗ ವಿರಾಟ್ ಕೊಹ್ಲಿ ಅವರಿಗಿಂತ ಎಂಟು ಪಾಯಿಂಟ್ ಹೆಚ್ಚು ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭದ ವೇಳೆ ಬಾಬರ್ ಅವರ ರೇಟಿಂಗ್ ಪಾಯಿಂಟ್ 837 ಆಗಿದ್ದರೆ  ಮೊದಲ ಪಂದ್ಯದಲ್ಲಿ ಅವರು 103 ರನ್ ಬಾರಿಸಿದ ನಂತರ ಅವರ ಪಾಯಿಂಟ್ ವಿರಾಟ್ ಕೊಹ್ಲಿ ಅವರನ್ನು ಮೀರಿ 858ಗೆ ತಲುಪಿತ್ತು.

ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಬಾಬರ್ ಅವರು ಆರನೇ ಸ್ಥಾನದಲ್ಲಿದ್ದರೆ  ಟಿ-20  ಪಂದ್ಯದಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News