ಐಪಿಎಲ್: ದೀಪಕ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಗೆ ಶಾರೂಖ್ ಖಾನ್ ಆಸರೆ

Update: 2021-04-16 15:43 GMT

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಬೌಲರ್  ದೀಪಕ್ ಚಹಾರ್ ದಾಳಿಗೆ ಕಂಗಲಾದ ಪಂಜಾಬ್ ಕಿಂಗ್ಸ್ ತಂಡ ಶುಕ್ರವಾರ ನಡೆದ ಐಪಿಎಲ್ ನ 8ನೇ ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 106 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಜಯಿಸಿದ  ನಾಯಕ ಎಂ.ಎಸ್. ಧೋನಿ ಪಂಜಾಬ್ ತಂಡವನ್ನು ಮೊದಲಿಗೆ ಬ್ಯಾಟಿಂಗ್ ಗೆ ಆಹ್ವಾನಿಸಿದರು.

ಪಂಜಾಬ್ ನ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶಾರೂಖ್ ಖಾನ್ (47, 36 ಎಸೆತ, 4 ಬೌಂಡರಿ, 2 ಸಿಕ್ಸರ್)ಹೊರತುಪಡಿಸಿ ಬೇರೆಯಾರೂ ದೊಡ್ಡ ಮೊತ್ತ ಗಳಿಸಲಿಲ್ಲ. ಕ್ರಿಸ್ ಗೇಲ್ ಹಾಗೂ ದೀಪಕ್ ಹೂಡಾ ತಲಾ 10 ರನ್ ಗಳಿಸಿದರೆ, ರಿಚರ್ಡ್ ಸನ್ 15 ರನ್ ಗಳಿಸಿದರು.

ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್(0) ಹಾಗೂ  ನಾಯಕ ಕೆಎಲ್ ರಾಹುಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಮಯಾಂಕ್ ಮೊದಲ ಓವರ್ ನ 4ನೇ ಎಸೆತದಲ್ಲಿ ದೀಪಕ್ ಚಹಾರ್ ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಕೇವಲ 5 ರನ್ ಗಳಿಸಿ ರನೌಟಾದರು. ಆ ನಂತರ ಬಂದ ಬ್ಯಾಟ್ಸ್ ಮನ್ ಗಳು ಬೇಗನೆ ವಿಕೆಟ್ ಕೈಚೆಲ್ಲಿದರು.

ದೀಪಕ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಸ್ಯಾಮ್ ಕರನ್(1-12), ಡ್ವೇಯ್ನ್ ಬ್ರಾವೊ(1-10) ಹಾಗೂ ಮೊಯಿನ್ ಅಲಿ(1-17) ತಲಾ ಒಂದು ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News