ಇಸ್ರೇಲ್: ಮಾಸ್ಕ್ ಧಾರಣೆ ಕಡ್ಡಾಯ ರದ್ದು, ಶಾಲೆಗಳ ಪುನಾರಂಭ

Update: 2021-04-18 17:25 GMT
ಸಾಂದರ್ಭಿಕ ಚಿತ್ರ

 ಟೆಲ್‌ಅವೀವ್,ಎ.18: ಸಾಮೂಹಿಕ ಲಸಿಕೆ ಅಭಿಯಾನವನ್ನು ತ್ವರಿತವಾಗಿ ನಡೆಸಿರುವ ಇಸ್ರೇಲ್, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧಾರಣೆಯ ನಿಯಮವನ್ನು ರದ್ದುಪಡಿಸಿದೆ ಹಾಗೂ ಶಾಲಾ,ಕಾಲೇಜುಗಳನ್ನು ಪುನಾರಂಭಿಸಿದೆ.

  ಎಲ್ಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ರವಿವಾರ ಶಾಲಾ ತರಗತಿಗಳನ್ನು ಪುನಾರಂಭಿಸಲಾಗಿದೆ. ಇದೇ ವೇಳೆ ಕಳೆದ ಒಂದು ವರ್ಷದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆಯನ್ನು ಕಡ್ಜಾಯಗೊಳಿಸಿರುವುದನ್ನು ರದ್ದುಪಡಿಸಲಾಗಿದೆ. ಆದರೆ ಸಭಾಂಗಣಗಳಲ್ಲಿ ಹಾಗೂ ಬೃಹತ್ ಸಭೆಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿರಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್ 90.30 ಲಕ್ಷ ಜನಸಂಖ್ಯೆಯ ಶೇ.53 ಮಂದಿ ಫೈಝರ್/ಬಯೋನ್‌ಟೆಕ್ ಸಂಸ್ಥೆಯ ಲಸಿಕೆಯ ಎರಡು ಡೋಸ್‌ಗಳನ್ನು ಈಗಾಗಲೇ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News