‘ಒಂದು ವೇಳೆ ನವಾಲ್ನಿ ಮೃತಪಟ್ಟಲ್ಲಿ ರಶ್ಯ ಪರಿಣಾಮ ಎದುರಿಸಬೇಕಾದೀತು’

Update: 2021-04-18 17:27 GMT

 ವಾಶಿಂಗ್ಟನ್,ಎ.18: ಜೈಲಿನಲ್ಲಿ ನಿರಶನ ನಡೆಸುತ್ತಿರುವ ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿಯಿ ನವಾಲ್ನಿ ಅವರು ಒಂದು ವೇಳೆ ಸಾವನ್ನಪ್ಪಿದ್ದಲ್ಲಿ ಅದರ ಪರಿಣಾಮವನ್ನು ರಶ್ಯ ಎದುರಿಸಬೇಕಾದೀತು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ರವಿವಾರ ಮಾಸ್ಕೋಗೆ ಎಚ್ಚರಿಕೆ ನೀಡಿದ್ದಾರೆ.

ನವಾಲ್ನಿ ಅವರ ಪ್ರಾಣಕ್ಕೆ ಅಪಾಯವೇನಾದರೂ ಸಂಭವಿಸಿದಲ್ಲಿ ರಶ್ಯ ವಿರುದ್ಧ ನಾವು ಕೈಗೊಳ್ಳಬಹುದಾದ ನಿರ್ದಿಷ್ಟ ಕ್ರಮಗಳು ಹಾಗೂ ನಿರ್ಬಂಧಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಆದರ ಈ ಹಂತದಲ್ಲಿ ನಾವು ಅದನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲವೆಂದು ಸುಲ್ಲಿವಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News