ಕೆನಡ: ಅಸ್ಟ್ರಾಝೆನೆಕ ಲಸಿಕೆ ಸ್ವೀಕರಿಸಿದ ಸೋಂಕಿತನಲ್ಲಿ ರಕ್ತಹೆಪ್ಪುಗಟ್ಟುವಿಕೆ

Update: 2021-04-18 17:33 GMT

ಟೊರೊಂಟೊ,ಎ.18: ಆಸ್ಟ್ರಾಝೆನೆಕಾದ ಕೋವಿಡ್-19 ಲಸಿಕೆಯ ಸ್ವೀಕರಿಸಿದ ಬಳಿಕ ಸೋಂಕಿತರೊಬ್ಬರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯುಂಟಾದ ಅಪರೂಪದ ಆದರೆ ಗಂಭೀರವಾದ ಪ್ರಕರಣವು ಕೆನಡದಲ್ಲಿ ವರದಿಯಾಗಿದೆಯೆಂದು ಆ ದೇಶದ ಆರೋಗ್ಯ ಇಲಾಖೆಯ ಅಧಿಕಾರಿಗಗಳು ತಿಳಿಸಿದ್ದಾರೆ. ಆದಾಗ್ಯೂ ಆಸ್ಟ್ರಾಝೆನೆಕಾದ ಕೋವಿಡ್-19 ಲಸಿಕೆಯ ಬಳಕೆಗೆ ಈಗಲೂ ಶಿಫಾರಸು ಮಾಡುವುದಾಗಿ ಅವರು ಹೇಳಿದ್ದಾರೆ.

 ಕೆನಡದ ಆಲ್ಬರ್ಟಾ ಪ್ರಾಂತದ ನಿವಾಸಿಯೊಬ್ಬರು ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಪೂರೈಕೆ ಮಾಡಿದ ಆಸ್ಟ್ರಾಝೆನೆಕ ಲಸಿಕೆಯನ್ನು ಪಡೆದ ಬಳಿಕ ಅವರಲ್ಲಿ ರಕ್ತಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡಿತ್ತು. ಆ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ಕೆನಡದ ಆರೋಗ್ಯ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.

  ಮಂಗಳವಾರದಂದು ಅಸ್ಟ್ರಾಝೆನೆಕ ಲಸಿಕೆ ಪಡೆದ ಕ್ವಿಬೆಕ್ ನಗರದ ಮಹಿಳೆಯೊಬ್ಬರಲ್ಲಿಯೂ ರಕ್ತಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News