×
Ad

300 ಬಂಡುಕೋರರ ಹತ್ಯೆ: ಚಾಡ್ ಸೇನೆ

Update: 2021-04-19 22:46 IST

ಅಂಜಾಮೇನಾ (ಚಾಡ್), ಎ. 19: ಎಂಟು ದಿನಗಳ ಹಿಂದೆ ದೇಶದ ಉತ್ತರ ಭಾಗದಲ್ಲಿ ಆಕ್ರಮಣ ನಡೆಸಿದ 300 ಬಂಡುಕೋರರನ್ನು ಕೊಂದಿರುವುದಾಗಿ ಚಾಡ್ ದೇಶದ ಸೇನೆ ಸೋಮವಾರ ತಿಳಿಸಿದೆ. ಸಂಘರ್ಷದಲ್ಲಿ ಐವರು ಸೈನಿಕರೂ ಹತರಾಗಿದ್ದಾರೆ ಎಂದು ಅದು ಹೇಳಿದೆ.

ಭಾರೀ ಶಸ್ತ್ರಸಜ್ಜಿತ ಬಂಡಾಯ ಗುಂಪು ಲಿಬಿಯದಲ್ಲಿರುವ ತನ್ನ ನೆಲೆಯಿಂದ ಎಪ್ರಿಲ್ 11ರಂದು ದಾಳಿ ಆರಂಭಿಸಿತು. ಅದೇ ದಿನ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News