ಸಂಪೂರ್ಣ ಲಸಿಕೆ ಪಡೆದಿದ್ದರೂ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿಕೊಳ್ಳಿ

Update: 2021-04-20 05:45 GMT

 ನ್ಯೂಯಾರ್ಕ್:  ಕೋವಿಡ್-19 ವಿರುದ್ಧ ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಭಾರತಕ್ಕೆ ತೆರಳದಂತೆ ಅಮೆರಿಕದ ಸಾರ್ವಜನಿಕ ಆರೋಗ್ಯ ಸಂಸ್ಥೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.  ಅಂತಹ ಪ್ರಯಾಣ ಅನಿವಾರ್ಯವಾಗಿದ್ದರೆ, ಹೊರಡುವ ಮೊದಲು ಎಲ್ಲ ವ್ಯಾಕ್ಸಿನೇಶನ್ ಪಡೆಯಲು ಸಲಹೆ ನೀಡಿದೆ. 

ಅಮೆರಿಕದ ಆರೋಗ್ಯ ಸಂಸ್ಥೆಯು ಭಾರತವನ್ನು ಅತ್ಯುನ್ನತ 4ನೇ ಮಟ್ಟದಲ್ಲಿ ಇರಿಸಿದೆ. ಇದು ಅತ್ಯಂತ ಉನ್ನತ ಮಟ್ಟದ ಕೋವಿಡ್-19 ಅನ್ನು ಸೂಚಿಸುತ್ತದೆ.

ಭಾರತದಲ್ಲಿ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಪೂರ್ಣ ವಾಗಿ ಲಸಿಕೆ ಹಾಕಿದ ಪ್ರಯಾಣಿಕರು ಕೂಡ ಕೋವಿಡ್-19 ರೂಪಾಂತರ ಸೋಂಕಿಗೆ ಒಳಗಾಗುವ ಹಾಗೂ ಹರಡುವ ಅಪಾಯವಿದೆ. ಭಾರತಕ್ಕೆ ಎಲ್ಲ ರೀತಿಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಭಾರತಕ್ಕೆ ತೆರಳುವ ಪ್ರಯಾಣಕರಿಗಾಗಿ ಪ್ರಮುಖ ಮಾಹಿತಿ ಕೇಂದ್ರವಾಗಿರುವ ಯುನೈಟೆಡ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್(ಸಿಡಿಸಿ)ತಿಳಿಸಿದೆ.

ಭಾರತದಲ್ಲಿ ರವಿವಾರ ಹೊಸ ಕೋವಿಡ್ ಪ್ರಕರಣವು 2.70ಲಕ್ಷವನ್ನು ದಾಟಿದೆ. ಸೋಂಕುಗಳು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿ ಸೇರಿದಂತೆ ಎಲ್ಲ ರಾಜ್ಯಗಳು ಕಪ್ರ್ಯೂ  ಹಾಗೂ ಲಾಕ್ ಡೌನ್ ಗಳನ್ನು ಘೋಷಿಸಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News