ಉಚಿತವಾಗಿ 'ಫ್ಯಾಬಿಫ್ಲೂ' ವಿತರಿಸುವುದಾಗಿ ಸಂಸದ ಗಂಭೀರ್ ಘೋಷಣೆ: ರಾಜೀನಾಮೆಗೆ ಆಗ್ರಹಿಸಿದ ಟ್ವಿಟರಿಗರು

Update: 2021-04-21 17:10 GMT

ಹೊಸದಿಲ್ಲಿ: ಜನತೆಯು ತನ್ನ ಕಚೇರಿಯಿಂದ ಆ್ಯಂಟಿ ವೈರಸ್ ಔಷಧಿ “ಫ್ಯಾಬಿಫ್ಲೂ’ವನ್ನು ಉಚಿತವಾಗಿ ಪಡೆಯಬಹುದು ಎಂದು ಬಿಜೆಪಿ ಸಂಸದ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಘೋಷಣೆ ಮಾಡಿದ್ದಾರೆ. ಈ ಘೋಷಣೆಯಿಂದ ಆಕ್ರೋಶಗೊಂಡಿರುವ ನೆಟ್ಟಿಗರು ಗಂಭೀರ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಪೂರ್ವ ದಿಲ್ಲಿಯ ಜನತೆಯು ಜಾಗೃತಿ ಎನ್ ಕ್ಲೇವ್ ನಲ್ಲಿರುವ ಸಂಸದರ ಕಚೇರಿಯಿಂದ 10ರಿಂದ 5ರ ನಡುವೆ  ಉಚಿತವಾಗಿ “ಫ್ಯಾಬಿಫ್ಲೂ’ ಟ್ಯಾಬ್ಲೆಟ್ ಪಡೆಯಬಹುದು ಎಂದು ಗಂಭೀರ್ ಟ್ವೀಟರ್ ನಲ್ಲಿ ಬರೆದಿದ್ದರು.

ಗಂಭೀರ್ ಮಾಡಿರುವ ಘೋಷಣೆಯನ್ನು ತಕ್ಷಣವೇ ಗಮನಿಸಿದ ಟ್ವಿಟರ್ ಬಳಕೆದಾರರು,  ಔಷಧಿ ಅಂಗಡಿಗಳಲ್ಲಿ ರೋಗಿಗಳಿಗೆ ಸುಲಭವಾಗಿ ಲಭ್ಯವಾಗದ “ಫ್ಯಾಬಿಫ್ಲೂ’ ಟ್ಯಾಬ್ಲೆಟ್ ಗಂಭೀರ್ ಹೇಗೆ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ತನ್ನ ರಾಜಕೀಯ ಮೈಲೇಜ್ ಗಾಗಿ ಉದ್ದೇಶಪೂರ್ವಕವಾಗಿ ಅಗತ್ಯ ಔಷಧಿಗಳನ್ನು ಶೇಖರಿಸಿ ಇಟ್ಟುಕೊಂಡಿದೆ ಎಂದು ಹಲವು ಟ್ವಿಟರ್ ಬಳಕೆದಾರರು ಆಪಾದಿಸಿದರು.  ಇಂತಹ ಪ್ರಮುಖ ಔಷಧಿಯನ್ನು ಇಷ್ಟೊಂದು ಪ್ರಮಾಣದಲ್ಲಿ ಶೇಖರಿಸಿ ಇಟ್ಟುಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದ್ದು, ಗೌತಮ್ ಗಂಭೀರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News