ಚೀನಾದೊಂದಿಗಿನ ಬೆಲ್ಡ್ ಆ್ಯಂಡ್ ರೋಡ್ ಒಪ್ಪಂದ ರದ್ದುಪಡಿಸಿದ ಆಸ್ಟ್ರೇಲಿಯ

Update: 2021-04-21 18:05 GMT

ಸಿಡ್ನಿ (ಆಸ್ಟ್ರೇಲಿಯ), ಎ. 21: ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್‌ಗೆ ಸೇರ್ಪಡೆಗೊಳ್ಳಲು ತನ್ನ ರಾಜ್ಯ ವಿಕ್ಟೋರಿಯ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸುವುದಾಗಿ ಆಸ್ಟ್ರೇಲಿಯ ಬುಧವಾರ ಘೋಷಿಸಿದೆ. ಈ ಒಪ್ಪಂದವು ದೇಶದ ವಿದೇಶ ನೀತಿಗೆ ಪೂರಕವಾಗಿಲ್ಲ ಎಂದು ಅದು ಹೇಳಿದೆ.

ವಿಕ್ಟೋರಿಯ ಸರಕಾರವು 2018ರಲ್ಲಿ ಚೀನಾದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಲು ಆಸ್ಟ್ರೇಲಿಯದ ವಿದೇಶ ಸಚಿವೆ ಮ್ಯಾರಿಸ್ ಪೇನ್ ಹೊಸ ಅಧಿಕಾರಗಳನ್ನು ಬಳಸಿಕೊಂಡಿದ್ದಾರೆ.

 ‘‘ಒಪ್ಪಂದವು ಆಸ್ಟ್ರೇಲಿಯದ ವಿದೇಶ ನೀತಿಗೆ ಪೂರಕವಾಗಿಲ್ಲ ಅಥವಾ ನಮ್ಮ ವಿದೇಶ ಸಂಬಂಧಗಳಿಗೆ ವ್ಯತಿರಿಕ್ತವಾಗಿದೆ’’ ಎಂದು ಪೇನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News