×
Ad

ಭಾರತಕ್ಕೆ ನೆರವು ನೀಡಲು ಫ್ರಾನ್ಸ್ ಸಿದ್ಧ: ಮ್ಯಾಕ್ರೋನ್

Update: 2021-04-23 20:59 IST

ಪ್ಯಾರಿಸ್ (ಫ್ರಾನ್ಸ್), ಎ. 23: ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡಲು ಫ್ರಾನ್ಸ್ ಸಿದ್ಧವಿದೆ ಎಂದು ಆ ದೇಶದ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.

ಭಾರತದಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ದೈನಂದಿನ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ಅವರು ಈ ಭರವಸೆ ನೀಡಿದ್ದಾರೆ.

‘‘ಕೊರೋನ ವೈರಸ್‌ನ ಭೀಕರ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತೀಯರಿಗೆ ನಾನು ಒಗ್ಗಟ್ಟಿನ ಸಂದೇಶವನ್ನು ನೀಡಬಯಸುತ್ತೇನೆ. ನಿಮ್ಮ ಈ ಹೋರಾಟದಲ್ಲಿ ನಿಮ್ಮೊಂದಿಗೆ ಫ್ರಾನ್ಸ್ ಇದೆ. ನಿಮಗೆ ನೆರವು ನೀಡಲು ನಾವು ಸಿದ್ಧರಿದ್ದೇವೆ’’ ಎಂಬ ಸಂದೇಶವನ್ನು ಮ್ಯಾಕ್ರೋನ್ ನೀಡಿದ್ದಾರೆ.

ಅವರ ಸಂದೇಶವನ್ನು ಫ್ರಾನ್ಸ್‌ನ ಭಾರತೀಯ ರಾಯಭಾರಿ ಇಮಾನುಯೆಲ್ ಲೆನೈನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News