ಬಗ್ದಾದ್: ಅವೆುರಿಕ ಸೈನಿಕರಿದ್ದ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ
ಬಗ್ದಾದ್ (ಇರಾಕ್), ಎ. 23: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಅಮೆರಿಕದ ಸೈನಿಕರ ನೆಲೆಯಿರುವ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಮೂರು ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಇರಾಕಿ ಪಡೆಗಳು ಇರುವ ವಾಯುನೆಲೆಯ ಭಾಗಕ್ಕೆ ರಾಕೆಟ್‌ಗಳು ಬಡಿದವು ಎಂದು ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. ಆ ವಾಯುನೆಲೆಯಲ್ಲಿ ಅಮೆರಿಕ ಸೈನಿಕರ ಜೊತೆಗೆ ಇರಾಕ್ ಸೈನಿಕರೂ ಇದ್ದಾರೆ.
ದಾಳಿಯಲ್ಲಿ ಓರ್ವ ಇರಾಕ್ ಸೈನಿಕ ಗಾಯಗೊಂಡಿದ್ದಾರೆ.
ಇದು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಇರಾಕ್‌ನಲ್ಲಿರುವ ಅಮೆರಿಕದ ಹಿತಾಸಕ್ತಿಗಳ ಮೇಲೆ ನಡೆದ ಎರಡನೇ ದಾಳಿಯಾಗಿದೆ. ರವಿವಾರ ಬಗ್ದಾದ್‌ನ ಉತ್ತರದಲ್ಲಿರುವ ಇನ್ನೊಂದು ವಾಯುನೆಲೆಯ ಮೇಲೆ ಐದು ರಾಕೆಟ್‌ಗಳು ಅಪ್ಪಳಿಸಿದ್ದವು. ಆ ದಾಳಿಯಲ್ಲಿ ಮೂವರು ಇರಾಕಿ ಸೈನಿಕರು ಮತ್ತು ಇಬ್ಬರು ವಿದೇಶಿ ಸೇನಾ ಗುತ್ತಿಗೆದಾರರು ಗಾಯಗೊಂಡಿದ್ದರು.
ಪ್ರಸಕ್ತ ದಾಳಿಯ ಹೊಣೆಯನ್ನು ಯಾರೂ ಹೊತ್ತಿಲ್ಲ. ಆದರೆ, ಇರಾಕ್‌ನಲ್ಲಿರುವ ಇರಾನ್ ಪರ ಗುಂಪುಗಳು ಈ ದಾಳಿ ನಡೆಸುತ್ತಿವೆ ಎಂದು ಅಮೆರಿಕ ಪದೇ ಪದೇ ದೂರುತ್ತಿದೆ.