×
Ad

ಐಪಿಎಲ್ ನಿಂದ ಹಿಂದೆ ಸರಿದ ಝಾಂಪ, ರಿಚರ್ಡ್ ಸನ್

Update: 2021-04-26 11:09 IST

Photo source: Twitter(@RCBTweets)
 

ಅಹ್ಮದಾಬಾದ್: ಆಸ್ಟ್ರೇಲಿಯ ಬೌಲರ್ ಗಳಾದ ಆಡಮ್ ಝಾಂಪ ಹಾಗೂ ಕೇನ್ ರಿಚರ್ಡ್‍ಸನ್ ವೈಯಕ್ತಿಕ ಕಾರಣದಿಂದ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ತಿಳಿಸಿದೆ.

ಆಸ್ಟ್ರೇಲಿಯದ ಇನ್ನೊರ್ವ ಆಟಗಾರ, ರಾಜಸ್ಥಾನ ರಾಯಲ್ಸ್ ವೇಗದ ಬೌಲರ್ ಆಂಡ್ರೂ ಟೈ ಅವರು ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮದೇ ದೇಶದಿಂದ ಲಾಕ್ ಔಟ್ ಆಗಬಹುದೆಂಬ ಭಯದಿಂದ ಐಪಿಎಲ್ ಲೀಗ್ ನಿಂದ ಹೊರ ನಡೆದಿದ್ದಾರೆ. 

ವೈಯಕ್ತಿಕ ಕಾರಣದಿಂದಾಗಿ ಝಾಂಪ ಹಾಗೂ ರಿಚರ್ಡ್ ಸನ್ ಐಪಿಎಲ್ ಋತುವಿನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ಸಾಧ್ಯವಾದಷ್ಟು ಎಲ್ಲ ರೀತಿಯ ಬೆಂಬಲವನ್ನು  ನೀಡಲಿದೆ ಎಂದು ಆರ್ ಸಿಬಿ ಫ್ರಾಂಚೈಸಿ ತಿಳಿಸಿದೆ.

ಲೆಗ್ ಸ್ಪಿನ್ನರ್ ಝಾಂಪ ಅವರನ್ನು ಆರ್‍ಸಿಬಿ 1.5 ಕೋ.ರೂ. ಹಾಗೂ ರಿಚರ್ಡ್‍ಸನ್ ಅವರನ್ನು 4 ಕೋ.ರೂ.ಗೆ ಆಟಗಾರರ ಹರಾಜಿನ ವೇಳೆ ಖರೀದಿಸಿತ್ತು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News