ಪಿಎಂ ಕೇರ್ಸ್‍ಗೆ 50,000 ಡಾಲರ್ ದೇಣಿಗೆ ನೀಡಿದ ಕೆಕೆಆರ್ ವೇಗದ ಬೌಲರ್ ಕಮಿನ್ಸ್

Update: 2021-04-26 10:59 GMT

ಕೋಲ್ಕತಾ: ಆಸ್ಟ್ರೇಲಿಯ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಭಾರತಕ್ಕೆ ಕೋವಿಡ್-19 ವಿರುದ್ಧ ಹೋರಾಡಲು ಪಿಎಂ ಕೇರ್ಸ್ ಫಂಡ್ ಗೆ 50,000 ಡಾಲರ್ ದೇಣಿಗೆ ನೀಡಿದ್ದಾರೆ.

ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಸಮಯದಲ್ಲಿ ಐಪಿಎಲ್ ಮುಂದುವರಿಯುವುದು ಸೂಕ್ತವೇ ಎಂಬ ಕುರಿತು ಇಲ್ಲಿ ಸಾಕಷ್ಟು ಚರ್ಚೆ  ನಡೆದಿವೆ. ಭಾರತದ ಜನತೆ ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಬಂಧಿಯಾಗಿರುವ ಕಾರಣ ಐಪಿಎಲ್ ಆಡುವುದರಿಂದ ಕಷ್ಟದ ಸಮಯದಲ್ಲಿ ಜನತೆಗೆ ಪ್ರತಿದಿನ ಕೆಲವು ಗಂಟೆ ಸಂತೋಷ ಹಾಗೂ ವಿಶ್ರಾಂತಿ ನೀಡುತ್ತದೆ ಎಂದು ಭಾರತ ಸರಕಾರ ಅಭಿಪ್ರಾಯಪಟ್ಟಿದೆ ಎಂದು ನನಗೆ ತಿಳಿಸಲಾಗಿದೆ ಎಂದು ಟ್ವಿಟರ್ ನಲ್ಲಿ ಕಮಿನ್ಸ್ ಬರೆದಿದ್ದಾರೆ.

ಭಾರತದ ಉತ್ಸಾಹ ಹಾಗೂ ಔದಾರ್ಯದಿಂದ ಸ್ಪರ್ಶಿಸಲ್ಪಟ್ಟಿರುವ ಜಗತ್ತಿನ ನನ್ನ ಸಹ ಐಪಿಎಲ್ ಆಟಗಾರರಿಗೆ ಪ್ರೋತ್ಸಾಹಿಸುತ್ತೇನೆ.  ನಾನು 50,000 ಡಾಲರ್‍ನಿಂದ ದೇಣಿಗೆ ನೀಡಲು ಆರಂಭಿಸುತ್ತೇನೆ ಎಂದು ಕಮಿನ್ಸ್ ಹೇಳಿದ್ದಾರೆ.

ಭಾರತದಲ್ಲಿ ಕೊರೋನ ವೈರಸ್ ಬಿಕ್ಕಟ್ಟು ಹದಗೆಟ್ಟುತ್ತಿರುವ ಸಂದರ್ಭದಲ್ಲಿ ಹಲವು ಆಸ್ಟ್ರೇಲಿಯ ಆಟಗಾರರು ಈಗ ನಡೆಯುತ್ತಿರುವ ಐಪಿಎಲ್ ನ್ನು ತ್ಯಜಿಸಿ ತಮ್ಮ ದೇಶಕ್ಕೆ ವಾಪಸಾಗುತ್ತಿದ್ದಾರೆ. ಆಡಮ್ ಝಾಂಪ, ಕೇನ್ ರಿಚರ್ಡ್‍ಸನ್ ಹಾಗೂ ಟೈ ಅವರು ಆಸ್ಟ್ರೇಲಿಯಕ್ಕೆ ತೆರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News