ಕಮಿನ್ಸ್ ಪಿಎಂ ಕೇರ್ಸ್ ಫಂಡ್ ಗೆ ದೇಣಿಗೆ ನೀಡಿದ್ದಕ್ಕೆ ಟ್ವಿಟ್ಟರಿಗರು ಪ್ರತಿಕ್ರಿಯಿಸಿದ್ದು ಹೀಗೆ…

Update: 2021-04-26 16:53 GMT

ಹೊಸದಿಲ್ಲಿ: ಐಪಿಎಲ್ ಆಡಲು ಸದ್ಯ ಭಾರತದಲ್ಲಿರುವ ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರು ಸೋಮವಾರ ಕೊರೋನ ವೈರಸ್ ವಿರುದ್ಧ ಹೋರಾಡಲು, ನಿರ್ದಿಷ್ಟವಾಗಿ ಆಸ್ಪತ್ರೆಗಳಿಗೆ ಆಮ್ಲಜನಕ ಖರೀದಿಗೆ ಭಾರತದ ಪಿಎಂ ಕೇರ್ಸ್ ಫಂಡ್ ಗೆ 50.000 ಡಾಲರ್ ದೇಣಿಗೆ ನೀಡಿದ್ದಾಗಿ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದರು.

ಟ್ವಿಟರ್ ಬಳಕೆದಾರರು ಮಾರಣಾಂತಿಕ ವೈರಸ್ ವಿರುದ್ಧ ಹೋರಾಡುತ್ತಿರುವ ದೇಶಕ್ಕೆ ಉದಾರ ದೇಣಿಗೆ ನೀಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಪಿಎಂ ಕೇರ್ಸ್ ಫಂಡ್ ಗೆ ದೇಣಿಗೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಿಎಂ ಕೇಸ್ ಫಂಡನ್ನು ಸರಕಾರ ದುರುಪಯೋಗಪಡಿಸಿಕೊಂಡಿದೆ.  ಹಣವನ್ನು ಸಾರ್ವಜನಿಕರಿಗೆ ಬಳಸಿರುವುದನ್ನು ತೋರಿಸಲು ಲೆಕ್ಕ ಪರಿಶೋಧನೆ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ.

ಕಮಿನ್ಸ್ ಅವರು ಪಿಎಂ ಕೇರ್ಸ್ ಬದಲು ಬೇರೆ ಯಾವುದೇ ಸಂಸ್ಥೆ ಅಥವಾ ದತ್ತಿ ಘಟಕಗಳನ್ನು ಆಯ್ಕೆ ಮಾಡಬಹುದಿತ್ತು. ಅವರು ಆರಿಸಿಕೊಂಡಿರುವ ಪಿಎಂ ಕೇರ್ಸ್ ಸೂಕ್ತವಾಗಿಲ್ಲ. ಅದು ದೇಶದ ಜನರಿಗೆ ಸಹಾಯ ಮಾಡಿಲ್ಲ ಎಂದು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News