ಐಪಿಎಲ್‌ನಲ್ಲಿರುವ ಆಸೀಸ್ ಆಟಗಾರರು ಭಾರತದಿಂದ ವಾಪಸಾಗಲು ತಮ್ಮದೇ ವ್ಯವಸ್ಥೆ ಮಾಡಬೇಕಾಗಿದೆ: ಸ್ಕಾಟ್ ಮೊರಿಸನ್
ಮೆಲ್ಬೋರ್ನ್: ಕೋವಿಡ್‌ನಿಂದಾಗಿ ಭಾರತದಿಂದ ಆಸ್ಟ್ರೇಲಿಯಕ್ಕೆ ತೆರಳುವ ಎಲ್ಲಾ ವಿಮಾನಯಾನಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಕ್ರಿಕೆಟಿಗರು ಸ್ವದೇಶಕ್ಕೆ ಮರಳಲು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಮಂಗಳವಾರ ಹೇಳಿದ್ದಾರೆ.
ಕೋವಿಡ್ -19 ಪ್ರಕರಣಗಳಲ್ಲಿನ ಗಮನಾರ್ಹ ಹೆಚ್ಚಳದಿಂದಾಗಿ ಆಸ್ಟ್ರೇಲಿಯವು ಮೇ 15ರವರೆಗೆ ಭಾರತದಿಂದ ನೇರ ಹಾರಾಟದ ಪ್ರಯಾಣಿಕರ ಎಲ್ಲಾ ವಿಮಾನಗಳನ್ನು ಮೇ 15 ರವರೆಗೆ ಸ್ಥಗಿತಗೊಳಿಸಿದೆ.
‘‘ ಆಟಗಾರರು ಭಾರತಕ್ಕೆಖಾಸಗಿಯಾಗಿ ಪ್ರಯಾಣಿಸಿದ್ದಾರೆ. ಇದು ಆಸ್ಟ್ರೇಲಿಯದ ಪ್ರವಾಸದ ಭಾಗವಾಗಿರಲಿಲ್ಲ. ಅವರು ತಮ್ಮ ಸ್ವಂತ ಆರ್ಥಿಕ ಸಂಪನ್ಮೂಲವನ್ನು ಸಂಪಾದಿಸುತ್ತಿದ್ದಾರೆ. ಆರೋಗ್ಯದ ಬಿಕ್ಕಟ್ಟಿನ ಮಧ್ಯೆ ಆಸ್ಟ್ರೇಲಿಯದ ಮೂವರು ಆಟಗಾರರಾದ ಆ್ಯಂಡ್ರ್ಯೂ ಟೈ, ಕೇನ್ ರಿಚರ್ಡ್ಸನ್ ಮತ್ತು ಆ್ಯಡಮ್ ಝಂಪಾ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಐಪಿಎಲ್‌ನಲ್ಲಿ ಸ್ಟೀವ್ ಸ್ಮಿತ್ (ಡೆಲ್ಲಿ ಕ್ಯಾಪಿಟಲ್ಸ್), ಡೇವಿಡ್ ವಾರ್ನರ್ (ಸನ್‌ರೈಸರ್ಸ್ ಹೈದರಾಬಾದ್) ಪ್ಯಾಟ್ ಕಮ್ಮಿನ್ಸ್ (ಕೋಲ್ಕತಾ ನೈಟ್ ರೈಡರ್ಸ್) ಮತ್ತು ಕೋಚ್ ರಿಕಿ ಪಾಂಟಿಂಗ್ (ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ಸೈಮನ್ ಕಾಟಿಚ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಇದ್ದಾರೆ. ವೀಕ್ಷಕ ವಿವರಣೆಗಾರ ಮ್ಯಾಥ್ಯೂ ಹೇಡನ್, ಬ್ರೆಟ್ ಲೀ, ಮೈಕೆಲ್ ಸ್ಲೇಟರ್ ಮತ್ತು ಲಿಸಾ ಸ್ಥಾಲೇಕರ್ ಐಪಿಎಲ್ ಲೀಗ್‌ನಲ್ಲಿ ಭಾಗಿಯಾಗಿರುವ ಆಸ್ಟ್ರೇಲಿಯನ್ನರಲ್ಲಿ ಸೇರಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಆಡುವ ಕ್ರಿಸ್ ಲಿನ್ ಐಪಿಎಲ್ ಮುಗಿದ ನಂತರ ಆಟಗಾರರನ್ನು ಮನೆಗೆ ಕರೆದೊಯ್ಯಲು ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಮಾಡುವಂತೆ ಕ್ರಿಕೆಟ್ ಆಸ್ಟ್ರೇಲಿಯವನ್ನು ಕೋರಿದ್ದಾರೆ.
ಲೀಗ್ ಪಂದ್ಯಗಳು ಮೇ 23 ರಂದು ಕೊನೆಗೊಳ್ಳಲಿದ್ದು, ಕ್ವಾಲಿಫೈಯರ್ ಪಂದ್ಯಗಳು (ಮೇ 25, 28) ಎಲಿಮಿನೇಟರ್ (ಮೇ 26) ಮತ್ತು ಅಂತಿಮ (ಮೇ 30) ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿವೆ.