ಲೆಬನಾನ್: ಕಲುಷಿತ ಸರೋವರದ ದಂಡೆಯಲ್ಲಿ 40 ಟನ್ ಸತ್ತ ಮೀನುಗಳು !

Update: 2021-04-30 17:15 GMT
ಫೋಟೊ ಕೃಪೆ: twitter.com

ಕರಾವೂನ್ (ಲೆಬನಾನ್), ಎ. 30: ಲೆಬನಾನ್ ನ ಲಿತಾನಿ ನದಿಯಲ್ಲಿರುವ ಸರೋವರವೊಂದರ ದಂಡೆಯಲ್ಲಿ ಟನ್ ಗಟ್ಟಲೆ ಸತ್ತ ಮೀನುಗಳು ರಾಶಿ ಬಿದ್ದಿವೆ. ಮೀನುಗಳ ಸಾವಿಗೆ ನದಿಯ ಕಲುಷಿತ ನೀರು ಕಾರಣವೆನ್ನಲಾಗಿದೆ. ಸರೋವರಕ್ಕೆ ಹೊಂದಿಕೊಂಡಿರುವ ಗ್ರಾಮವನ್ನು ದುರ್ವಾಸನೆ ಆವರಿಸಿದೆ.

ಲೆಬನಾನ್ ನ ಅತಿ ಉದ್ದದ ನದಿ ಲಿತಾನಿಯಲ್ಲಿರುವ ಕರಾವೂನ್ ಸರೋವರದ ಸಮೀಪ ರಾಶಿ ಬಿದ್ದಿರುವ ಮೀನುಗಳನ್ನು ಸ್ವಯಂಸೇವಕರು ಸಂಗ್ರಹಿಸುತ್ತಿದ್ದಾರೆ. ಒಳಚರಂಡಿ ಮತ್ತು ತ್ಯಾಜ್ಯ ನೀರನ್ನು ಸರೋವರಕ್ಕೆ ಬಿಡುತ್ತಿರುವುದು ಅದು ಕಲುಷಿತಗೊಳ್ಳಲು ಕಾರಣವೆನ್ನಲಾಗಿದೆ. ಜಲಮಾಲಿನ್ಯದ ಬಗ್ಗೆ ಪರಿಸರ ಹೋರಾಟಗಾರರು ವರ್ಷಗಳಿಂದ ಎಚ್ಚರಿಸುತ್ತಾ ಬಂದಿದ್ದಾರೆ.
ಸತ್ತ ಮೀನುಗಳ ಸಮೀಪದ ಸರೋವರದಲ್ಲಿ ತ್ಯಾಜ್ಯಗಳ ರಾಶಿಗಳು ತೇಲುತ್ತಿವೆ. ಜಲಾಶಯದ ಸಮೀಪ ನೊಣಗಳ ದಂಡು ಹಾರಾಡುತ್ತಿವೆ ಹಾಗೂ ಲಕ್ಷಾಂತರ ಮೀನುಗಳು ಕೊಳೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News