ಭಾರತ ಸೇರಿದಂತೆ ಹಲವು ದೇಶಗಳ ಕಾರ್ಮಿಕರಿಗೆ ಪ್ರವೇಶ ನಿಷೇಧ: ಸಿಂಗಾಪುರ

Update: 2021-05-08 15:59 GMT

ಸಿಂಗಾಪುರ, ಮೇ 8: ಹಲವಾರು ದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿರುವ ಮತ್ತು ವೈರಸ್ನ ಹೊಸ ಪ್ರಭೇದಗಳು ಹುಟ್ಟಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ವಾರಗಳಲ್ಲಿ ಕೆಲಸದ ಪಾಸ್ಗಳನ್ನು ಹೊಂದಿರುವವರು ಮತ್ತು ಅವರ ಆಶ್ರಿತರ ದೇಶ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ಸಿಂಗಾಪುರ ಹೇಳಿದೆ.

‘‘ಕೊರೋನ ವೈರಸ್ ಸಾಂಕ್ರಾಮಿಕ ಜಗತ್ತಿನಾದ್ಯಂತ ವೇಗವಾಗಿ ಹಾಗೂ ಭೀಕರವಾಗಿ ಹರಡುತ್ತಿರುವ ಈ ಸಮಯದಲ್ಲಿ, ಸಾಂಕ್ರಾಮಿಕದ ಗರಿಷ್ಠ ಅಪಾಯಕ್ಕೆ ಈಡಾಗಿರುವ ದೇಶಗಳು ಮತ್ತು ವಲಯಗಳಿಂದ ಬರುವ ಜನರು ಸಿಂಗಾಪುರ ಪ್ರವೇಶಿಸುವುದನ್ನು ಮಂಗಳವಾರದಿಂದ ನಿರ್ಬಂಧಿಸಲಾಗುವುದು. ಅವರಿಗೆ ಈಗಾಗಲೇ ಕೆಲಸದ ಪಾಸ್ಗಳನ್ನು ನೀಡಲಾಗಿದ್ದರೂ ಪ್ರವೇಶ ನಿಬಂಧ ಅನ್ವಯಿಸುವುದು’’ ಎಂದು ಸಿಂಗಾಪುರದ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಆದರೆ, ಈಗಾಗಲೇ ಕೆಲಸದ ಪಾಸ್ಗಳನ್ನು ಪಡೆದಿರುವ ಕಟ್ಟಡ ನಿರ್ಮಾಣ, ಮರೀನ್ ಶಿಪ್ಯಾರ್ಡ್ ಮತ್ತು ಸಂಸ್ಕರಣೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಿಂಗಾಪುರ ಪ್ರವೇಶಿಸಲು ಅನುಮತಿ ನೀಡಲಾಗುವುದು.

ಈಗಾಗಲೇ ಕೆಲಸದ ಪಾಸ್ಗಳನ್ನು ಪಡೆದಿರುವ ವಲಸಿಗ ಮನೆಗೆಲಸಗಾರರಿಗೂ ಸಿಂಗಾಪುರ ಪ್ರವೇಶಿಸಲು ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News