ರಾಜಸ್ಥಾನ ರಾಯಲ್ಸ್ ವೇಗದ ಬೌಲರ್ ಚೇತನ್ ಸಕಾರಿಯಾ ಅವರ ತಂದೆ ಕೋವಿಡ್ ನಿಂದ ನಿಧನ

Update: 2021-05-09 08:40 GMT

ಜೈಪುರ: ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲರ್ ಚೇತನ್ ಸಕಾರಿಯಾ ಅವರ ತಂದೆ ಕೋವಿಡ್ -19ನಿಂದಾಗಿ ಮೃತಪಟ್ಟಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ರವಿವಾರ ತಿಳಿಸಿದೆ.

ಚೇತನ ಸಕಾರಿಯಾ ಅವರ ತಂದೆ ಕಾಂಜಿಭಾಯ್ ಸಕಾರಿಯಾ ಅವರು ಇಂದು ಬೆಳಗ್ಗೆ ಕೋವಿಡ್-19 ನಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ನಮಗೆ ನೋವಾಗುತ್ತಿದೆ.  ಕಷ್ಟದ ಸಮಯದಲ್ಲಿ ಚೇತನ್ ಹಾಗೂ ಅವರ ಕುಟುಂಬಕ್ಕೆ ಸಾಧ್ಯವಾದಷ್ಟು ಬೆಂಬಲ ನೀಡುತ್ತೇವೆ ಎಂದು ರಾಜಸ್ಥಾನ ರಾಯಲ್ಸ್ ಟ್ವೀಟಿಸಿದೆ.

ಎಡಗೈ ವೇಗದ ಬೌಲರ್ ಸಕಾರಿಯಾ ಈ ವರ್ಷ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ್ದಾರೆ. ಸಕಾರಿಯಾ ಈ ವರ್ಷದ ಜನವರಿಯಲ್ಲಿ ತನ್ನ ಸಹೋದರನನ್ನು ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News