×
Ad

ಕೊರೋನ ವೈರಸನ್ನು ಆಯುಧವಾಗಿ ಬಳಸುವ ಬಗ್ಗೆ ಚೀನೀ ವಿಜ್ಞಾನಿಗಳು ಚರ್ಚಿಸಿದ್ದರು

Update: 2021-05-09 23:17 IST

ಬೀಜಿಂಗ್ (ಚೀನಾ), ಮೇ 9: ಸಾರ್ಸ್ ಕೊರೋನ ವೈರಸ್ ಗಳು ಹೊಸ ಕಾಲದ ವಂಶವಾಹಿ ಆಯುಧಗಳು ಎಂಬುದಾಗಿ 2015ರಲ್ಲಿ ಸಾರ್ಸ್ ಸಾಂಕ್ರಾಮಿಕ ಹರಡುವ ಮುನ್ನ ಚೀನಾದ ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು ಸಂಶೋಧನಾ ದಾಖಲೆ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ವೀಕೆಂಡ್ ಆಸ್ಟ್ರೇಲಿಯನ್ ಪತ್ರಿಕೆ ವರದಿ ಮಾಡಿದೆ.

ಈ ವಂಶವಾಹಿ ಆಯುಧಗಳನ್ನು ಮಾನವನಿಗೆ ಕಾಯಿಲೆ ಉಂಟು ಮಾಡುವ ವೈರಸ್ ಆಗಿ ಕೃತಕವಾಗಿ ಮಾರ್ಪಾಡಿಸಬಹುದು ಹಾಗೂ ಬಳಿಕ ಅದನ್ನು ಆಯುಧವನ್ನಾಗಿ ಮಾಡಿ ಹೊರಬಿಡಬಹುದು ಎಂದು ಸಂಶೋಧನಾ ದಾಖಲೆಯಲ್ಲಿ ಬರೆಯಲಾಗಿದೆ ಎಂದು ಪತ್ರಿಕೆ ಹೇಳಿದೆ.

ಮೂರನೇ ಜಾಗತಿಕ ಯುದ್ಧವನ್ನು ಜೈವಿಕ ಅಸ್ತ್ರಗಳ ಮೂಲಕ ಹೋರಾಡಲಾಗುತ್ತದೆ ಎಂಬುದಾಗಿ ದಾಖಲೆಯಲ್ಲಿ ಬರೆಯಲಾಗಿದೆ ಎಂದು ವೀಕೆಂಡ್ ಆಸ್ಟ್ರೇಲಿಯನ್ ಹೇಳಿದೆ.
ಕೋವಿಡ್-19 ಸಾಂಕ್ರಾಮಿಕ ದಾಳಿಯಿಡುವ ಐದು ವರ್ಷಗಳ ಮೊದಲು, ಸಾರ್ಸ್ ಕೊರೋನ ವೈರಸನ್ನು ಆಯುಧವನ್ನಾಗಿ ಬಳಸುವ ಬಗ್ಗೆ ಚೀನಾದ ಸೇನಾ ವಿಜ್ಞಾನಿಗಳು ಚರ್ಚಿಸಿದ್ದರು ಎಂದು ಅದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News