ಬಿದಿರಿನಿಂದ ತಯಾರಿಸಿದ ಬ್ಯಾಟನ್ನುತಿರಸ್ಕರಿಸಿದ ಎಂಸಿಸಿ

Update: 2021-05-12 07:51 GMT
ಫೋಟೊ ಕೃಪೆ: //twitter.com/Cricfrenzylive/

ಲಂಡನ್: ಮೇರಿಲೆಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬಿದಿರಿನಿಂದ ತಯಾರಿಸಿದ ಬ್ಯಾಟ್‌ಗಳ ಕಲ್ಪನೆಯನ್ನು ತಿರಸ್ಕರಿಸಿದೆ. ಇದು ಪ್ರಸ್ತುತ ಜಾರಿಯಲ್ಲಿರುವ ಆಟದ ನಿಯಮಗಳ ಪ್ರಕಾರ ಕಾನೂನುಬಾಹಿರ ಎಂದು ಹೇಳಿದೆ.

ಕೇಂಬ್ರಿಡ್ಜ್‌ನ ಯುನಿವರ್ಸಿಟಿಯ ದರ್ಶಿಲ್ ಷಾ ಹಾಗೂ ಬೆನ್ ಟಿಂಕ್ಲರ್-ಡೇವಿಸ್ ನಡೆಸಿದ ಅಧ್ಯಯನದ ಪ್ರಕಾರ, ಬಿದಿರಿನಿಂದ ತಯಾರಿಸಿದ ಬ್ಯಾಟ್‌ಗಳು ಆರ್ಥಿಕವಾಗಿ ಸಮರ್ಥನೀಯವಾಗಿವೆ ಹಾಗೂ ಸಾಂಪ್ರದಾಯಿಕವಾಗಿ ಬಳಸುವ ವಿಲ್ಲೊದಿಂದ ತಯಾರಿಸಿದ್ದಕ್ಕಿಂತ ಗಟ್ಟಿಯಾಗಿರುತ್ತವೆ ಎಂದು ಹೇಳಲಾ

ಗಿದೆ. ‘ಪ್ರಸ್ತುತ, ಕಾನೂನು 5.3.2 ರ ಪ್ರಕಾರ ಬ್ಯಾಟ್‌ನ ಬ್ಲೇಡ್ ಕೇವಲ ಮರದಿಂದ ಕೂಡಿರಬೇಕು. ಆದ್ದರಿಂದ ಬಿದಿರು ಇದು ಹುಲ್ಲು ವಿಲೋಗೆ ವಾಸ್ತವಿಕ ಪರ್ಯಾಯವಾಗಿ ಪರಿಗಣಿಸಲು ಕಾನೂನು ಬದಲಾವಣೆಯ ಅಗತ್ಯವಿರುತ್ತದೆ ಎಂದು ಎಂಸಿಸಿ ಸೋಮವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಮುಖ್ಯವಾಗಿ, ಬಿದಿರನ್ನು ನಿರ್ದಿಷ್ಟವಾಗಿ ಅನುಮತಿಸಲು ಕಾನೂನನ್ನು ಬದಲಾಯಿಸಬೇಕಾಗಿದೆ, ಅದನ್ನು ಮರವೆಂದು ಗುರುತಿಸಬೇಕಾಗಿದ್ದರೂ ಸಹ, ಇದು ಈಗಿನ ಕಾನೂನಿನ ಪ್ರಕಾರ ಕಾನೂನುಬಾಹಿರವಾಗಿರುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News