ಇಸ್ರೇಲ್ ದಾಳಿಯನ್ನು ಬೆಂಬಲಿಸುವ ಮೂಲಕ ಕೈಗಳಲ್ಲಿ ರಕ್ತ ಮೆತ್ತಿಕೊಂಡ ಬೈಡನ್: ಟರ್ಕಿ ಅಧ್ಯಕ್ಷ ಎರ್ದೊಗಾನ್ ಆಕ್ರೋಶ

Update: 2021-05-19 04:50 GMT

ಅಂಕಾರ (ಟರ್ಕಿ), ಮೇ 18: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಭೀಕರ ಬಾಂಬ್ ದಾಳಿಗಳನ್ನು ಬೆಂಬಲಿಸುವ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ತನ್ನ ಕೈಗಳಿಗೆ ರಕ್ತವನ್ನು ಮೆತ್ತಿಸಿಕೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಸೋಮವಾರ ಹೇಳಿದ್ದಾರೆ.

ಇದು ಜನವರಿಯಲ್ಲಿ ಶ್ವೇತಭವನಕ್ಕೆ ಆಗಮಿಸಿದ ಬಳಿಕ ಜೋ ಬೈಡನ್ ವಿರುದ್ಧ ಟರ್ಕಿ ಅಧ್ಯಕ್ಷರು ನಡೆಸಿರುವ ವಾಗ್ದಾಳಿಗಳಲ್ಲೇ ಅತ್ಯಂತ ತೀಕ್ಷ್ಣ ದಾಳಿಯಾಗಿದೆ.

ನೀವು ನಿಮ್ಮ ರಕ್ತಸಿಕ್ತ ಕೈಗಳಿಂದ ಇತಿಹಾಸವನ್ನು ಬರೆಯುತ್ತಿದ್ದೀರಿ ಎಂದು ಟೆಲಿವಿಶನ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಎರ್ದೊಗಾನ್ ಬೈಡನ್‌ರತ್ತ ಬೆಟ್ಟು ಮಾಡುತ್ತಾ ಹೇಳಿದರು.

ಇದನ್ನು ಹೇಳುವಂತೆ ನೀವು ಬಲವಂತಪಡಿಸಿದ್ದೀರಿ. ಯಾಕೆಂದರೆ, ಈ ವಿಷಯದಲ್ಲಿ ನಾವು ಇನ್ನು ಮುಂದೆ ಮೌನವಾಗಿರಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News